‘ಚಿಕನ್ ಸ್ಟಾಕ್’ ಮಾಡುವ ವಿಧಾನ

ನಾನ್ ವೆಜ್ ಸೂಪ್ ಮಾಡುವಾಗ ಚಿಕನ್ ಸ್ಟಾಕ್ ಉಪಯೋಗಿಸುತ್ತೇವೆ. ಇದನ್ನು ಒಮ್ಮೆ ಮಾಡಿಟ್ಟುಕೊಂಡರೆ ಸೂಪ್ ಕುಡಿಯಬೇಕು ಅನಿಸಿದಾಗಲೆಲ್ಲಾ ಇದನ್ನು ಬಳಸಬಹುದು. ಮಾಡುವ ವಿಧಾನ ಕೂಡ ಸುಲಭವಿದೆ ಟ್ರೈ ಮಾಡಿ.

ಬೇಕಾಗುವ ಸಾಮಗ್ರಿಗಳು:

ಎಣ್ಣೆ – 1 ಟೀ ಸ್ಪೂನ್, ಈರುಳ್ಳಿ – 1 ಸಣ್ಣದ್ದು, ಬೆಳ್ಳುಳ್ಳಿ – 10 ಎಸಳು, ಶುಂಠಿ – 2 ಇಂಚು, ಚಿಕನ್ ಬೋನ್ಸ್ – 1 ಇಡೀ ಕೋಳಿಯದ್ದು, ಪಲಾವ್ ಎಲೆ – 2, ನೀರು – ಬೇಕಾಗುವಷ್ಟು, ಉಪ್ಪು – ರುಚಿಗೆ ತಕ್ಕಷ್ಟು, ಮೆಣಸಿನಕಾಳು – 1 ಟೇಬಲ್ ಸ್ಪೂನ್.

ಮಾಡುವ ವಿಧಾನ:

ಕುಕ್ಕರ್ ನಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಅದಕ್ಕೆ ಕತ್ತರಿಸಿದ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಎಸಳು, ಪಲಾವ್ ಎಲೆ ಹಾಕಿ ಒಂದು ನಿಮಿಷಗಳ ಕಾಲ ಮಿಕ್ಸ್ ಮಾಡಿ. ಇದಕ್ಕೆ ಚಿಕನ್ ಹಾಕಿ 5 ನಿಮಿಷಗಳ ಕಾಲ ಫ್ರೈ ಮಾಡಿ.

ನಂತರ ಇದಕ್ಕೆ ಉಪ್ಪು, ಕಾಳುಮೆಣಸಿನ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕುಕ್ಕರ್ ಮುಚ್ಚಳ ಮುಚ್ಚಿ 6 ವಿಷಲ್ ಕೂಗಿಸಿಕೊಳ್ಳಿ. ನಂತರ ಇದನ್ನು ಸೋಸಿಕೊಂಡು ಒಂದು ಬಾಟಲ್ ನಲ್ಲಿ ಸ್ಟೋರ್ ಮಾಡಿ. ಯಾವಾಗ ಬೇಕೋ ಆವಾಗ ಉಪಯೋಗಿಸಿಕೊಳ್ಳಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read