ʼಸಿಂಪಲ್ ಡ್ರೆಸ್ʼ ನಲ್ಲೂ ಸ್ಟೈಲಿಶ್ ಲುಕ್ ಹೇಗೆ….? ಇಲ್ಲಿವೆ ಕೆಲವು ಟಿಪ್ಸ್

ಪ್ರತಿಯೊಬ್ಬರೂ ಸುಂದರವಾಗಿ ಹಾಗೂ ಸ್ಟೈಲಿಶ್ ಕಾಣಲು ಬಯಸ್ತಾರೆ. ಆದ್ರೆ ಅನೇಕರಿಗೆ ಸುಂದರವಾಗಿ ಕಾಣಲು ಏನು ಮಾಡಬೇಕು ಎಂಬುದು ಗೊತ್ತಿರುವುದಿಲ್ಲ.

ಮೇಕಪ್ ನಿಂದ ಮಾತ್ರ ಸುಂದರವಾಗಿ ಕಾಣಲು ಸಾಧ್ಯ ಎಂದು ಅನೇಕರು ಅಂದುಕೊಂಡಿದ್ದಾರೆ. ಆದ್ರೆ ಮೇಕಪ್ ಒಂದೇ ಅಲ್ಲ ಇನ್ನೂ ಅನೇಕ ವಿಷ್ಯಗಳು ಸುಂದರವಾಗಿ ಹಾಗೂ ಸ್ಟೈಲಿಶ್ ಆಗಿ ಕಾಣಲು ಮುಖ್ಯ. ಮೇಕಪ್ ಇಲ್ಲದೆ ಒಳ್ಳೆ ಡ್ರೆಸ್ ಹಾಗೂ ಇತರ ಸೌಂದರ್ಯ ವಸ್ತುಗಳಿಂದ ನಿಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳಬಹುದು.

ಉತ್ತಮ ಬಟ್ಟೆ ಜೊತೆ ಸುಂದರ ಪಾದರಕ್ಷೆಯನ್ನು ಆಯ್ಕೆ ಮಾಡಿಕೊಳ್ಳಿ. ಮುಖ, ಡ್ರೆಸ್ ಮಾತ್ರವಲ್ಲ ಪಾದರಕ್ಷೆಯೂ ಮಹತ್ವದ ಪಾತ್ರ ವಹಿಸುತ್ತದೆ. ಸುಂದರ ಡ್ರೆಸ್ ಆಕರ್ಷಣೆಯನ್ನು ಕೆಟ್ಟ ಪಾದರಕ್ಷೆ ಹಾಳು ಮಾಡಬಹುದು. ಯಾವ ಡ್ರೆಸ್ ಗೆ ಯಾವ ಪಾದರಕ್ಷೆ ಸೂಕ್ತ ಎಂಬುದನ್ನು ನೋಡಿ ಆಯ್ಕೆ ಮಾಡಿಕೊಳ್ಳಿ.

ಸಿಂಪಲ್ ಡ್ರೆಸ್ ಧರಿಸಿದ್ದು, ಅದ್ರಲ್ಲೂ ಸ್ಟೈಲಿಶ್ ಕಾಣಬೇಕೆಂಬುದು ನಿಮ್ಮ ಬಯಕೆಯಾಗಿದ್ದರೆ ಡ್ರೆಸ್ ಗೆ ಹೊಂದುವ ಕಿವಿಯೋಲೆ, ಬಳೆ, ಬ್ರೇಸ್ಲೈಟ್, ವಾಚ್ ಆಯ್ಕೆ ಮಾಡಿಕೊಳ್ಳಿ. ಸರಳ ಡ್ರೆಸ್ ನಲ್ಲಿಯೂ ಇವು ನಿಮ್ಮನ್ನು ಸ್ಟೈಲಿಶ್ ಕಾಣುವಂತೆ ಮಾಡುತ್ತವೆ. ಮಾರುಕಟ್ಟೆಯಲ್ಲಿ ಬಗೆ ಬಗೆಯ ಕಿವಿಯೋಲೆ, ಬ್ರೇಸ್ಟೈಟ್, ವಾಚ್, ದುಪಟ್ಟಾ ಸೇರಿದಂತೆ ಅನೇಕ ಸೌಂದರ್ಯ ಪರಿಕರಗಳಿವೆ. ಅವುಗಳನ್ನು ನಿಮ್ಮ ಡ್ರೆಸ್ ಗೆ ಮ್ಯಾಚ್ ಮಾಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read