ನಿಮ್ಮ ಮನೆಯಲ್ಲೂ ʼತ್ರಿವರ್ಣ ಧ್ವಜʼ ಹಾರುತ್ತಿದೆಯಾ ? ʼಹರ್ ಘರ್ ತಿರಂಗʼ ಸರ್ಟಿಫಿಕೇಟ್ ಹೀಗೆ ಡೌನ್ಲೋಡ್ ಮಾಡಿ

ಹರ್ ಘರ್ ತಿರಂಗ ಅಭಿಯಾನ ಮೂರನೇ ವರ್ಷ ಯಶಸ್ವಿಯಾಗಿ ನಡೆಯುತ್ತಿದೆ. ಆಗಸ್ಟ್‌ 9ರಿಂದ ಆಗಸ್ಟ್‌ 15ರವರೆಗೆ ನಡೆಯುವ ಈ ಅಭಿಯಾನದಲ್ಲಿ ಪ್ರತಿಯೊಬ್ಬ ಭಾರತೀಯನೂ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾನೆ.

2022 ರಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವದ ಸಮಯದಲ್ಲಿ ಪ್ರಾರಂಭವಾದ ಈ ಅಭಿಯಾನ, ನಾಗರಿಕರು ತಮ್ಮ ಮನೆಯಲ್ಲಿ ರಾಷ್ಟ್ರಧ್ವಜ ಹಾರಿಸಲು ಅವಕಾಶ ನೀಡಿದೆ. ಈ ವರ್ಷದ ಅಭಿಯಾನವು ಹೊಸ ಸಂಗತಿಯನ್ನು ಪರಿಚಯಿಸಿದೆ. ಆಗಸ್ಟ್‌ 13ರಂದು ತಿರಂಗಾ ಬೈಕ್ ರ್ಯಾಲಿ ನಡೆದಿದೆ.

ಹರ್ ಘರ್ ತಿರಂಗ ಅಭಿಯಾನದಲ್ಲಿ ಪಾಲ್ಗೊಂಡಿರುವ ಭಾರತೀಯರು ಧ್ವಜದೊಂದಿಗೆ ತಮ್ಮ ಪ್ರೊಫೈಲ್ ಚಿತ್ರಗಳನ್ನು ನವೀಕರಿಸುವುದು ಮತ್ತು ಅಧಿಕೃತ ಪ್ರಚಾರ ವೆಬ್‌ಸೈಟ್ harghartiranga.com ನಲ್ಲಿ ಸೆಲ್ಫಿಗಳನ್ನು ಹಂಚಿಕೊಳ್ಳುವುದು ಸೇರಿದಂತೆ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ನಾಗರಿಕರಿಗೆ ಕರೆ ನೀಡಿದ್ದಾರೆ.

ಹರ್ ಘರ್ ತಿರಂಗ ಪ್ರಮಾಣಪತ್ರವನ್ನು ಹೀಗೆ ಡೌನ್‌ಲೋಡ್ ಮಾಡಿ : ಮೊದಲು ನೀವು hargartiranga.com ಗೆ ಭೇಟಿ ನೀಡಬೇಕು. ಸೆಲ್ಫಿ ಅಪ್‌ಲೋಡ್ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ನಂತ್ರ ಭಾಗವಹಿಸಲು  ಆಯ್ಕೆ ಮೇಲೆ ನೀವು ಕ್ಲಿಕ್‌ ಮಾಡಿದಾಗ, ಹೊಸ ಪೇಜ್‌ ತೆರೆದುಕೊಳ್ಳುತ್ತದೆ. ಅದ್ರಲ್ಲಿ ನಿಮ್ಮ ಹೆಸರು, ಫೋನ್ ಸಂಖ್ಯೆ, ದೇಶ ಮತ್ತು ರಾಜ್ಯವನ್ನು ನಮೂದಿಸಿ, ನಂತರ ನಿಮ್ಮ ಸೆಲ್ಫಿ ತೆಗೆದುಕೊಂಡು ಅಪ್ಲೋಡ್‌ ಮಾಡ್ಬೇಕು. ಫೋಟೋ ಅಪ್ಲೋಡ್‌ ಆದ್ಮೇಲೆ ಡೌನ್‌ಲೋಡ್ ಮಾಡಲು ಪ್ರಮಾಣಪತ್ರವನ್ನು ರಚಿಸಿ ಕ್ಲಿಕ್ ಮಾಡಬೇಕು. ಪ್ರಮಾಣ ಪತ್ರ ಬಂದ ಮೇಲೆ ಡೌನ್ಲೋಡ್‌ ಆಯ್ಕೆ ಮೂಲಕ ನಿಮ್ಮ ಪ್ರಮಾಣಪತ್ರವನ್ನು ಡೌನ್ಲೋಡ್‌ ಮಾಡಬೇಕು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read