ಇಲ್ಲಿದೆ ‘ಇಯರ್ ಫೋನ್’ ಕ್ಲೀನ್ ಮಾಡುವ ಸುಲಭ ವಿಧಾನ

ಈಗಂತೂ ಇಯರ್ ಫೋನ್,‌ ಹ್ಯಾಂಡ್ಸ್ ಫ್ರೀ ಇಲ್ಲದೆ ಬದುಕೇ ಅಪರಿಪೂರ್ಣ ಎನಿಸಿಬಿಟ್ಟಿದೆ. ಅಷ್ಟರ ಮಟ್ಟಿಗೆ ನಾವು ಗ್ಯಾಜೆಟ್ ಗಳಿಗೆ ಒಗ್ಗಿಕೊಂಡು ಬಿಟ್ಟಿದ್ದೇವೆ.

ಪ್ರತಿ ದಿನ ಮನೆಯಿಂದ ಹೊರಗೆ ಹೊರಟರೆ ಸಾಕು ಕಿವಿಯೊಳಗೆ ಇಯರ್ ಫೋನ್ ಕೂತುಬಿಡಬೇಕು. ಮನೆಗೆ ಮರಳಿದ ಬಳಿಕವೇ ಅದು ನಮ್ಮ ಕಿವಿಯಿಂದ ಕೆಳಗಿಳಿಯುವುದು.

ಇಂತಹ ಇಯರ್ ಫೋನ್ ನಲ್ಲೂ ಧೂಳು, ಕಸ ಸೇರಿಕೊಳ್ಳುತ್ತದೆ. ಕಿವಿಯೊಳಗಿನ ಕೊಳೆಯನ್ನು ಹೇಗೆ ತೆಗೆಯುತ್ತೇವೆಯೋ ಇದನ್ನು ಕೂಡ ಹಾಗೆಯೇ ತೆಗೆಯುತ್ತಿರಬೇಕು.

ಆದರೆ, ಅಷ್ಟು ಸಣ್ಣ ಉಪಕರಣದ ಒಳಗಿನ ಕಸ ತೆಗೆಯುವುದಾದರೂ ಹೇಗೆ ಎನ್ನುವಿರಾ ? ಇಲ್ಲಿದೆ ಓದಿ ಸರಳ ಪರಿಹಾರ.

ಇದಕ್ಕೆ ಟೂಥ್ ಪಿಕ್, ಕ್ಲೇ ಬಾಲ್, ಇಯರ್ ಬಡ್ ಇದ್ದರೆ ಸಾಕು. ಹಲ್ಲಿನ ಸಂಧಿಯಲ್ಲಿ ಏನಾದರೂ ಸಿಲುಕಿದರೆ, ತೆಗೆಯಲು ಬಳಸುವ ಟೂಥ್ ಪಿಕ್ ಮೂಲಕ ಇಯರ್ ಫೋನ್ ನ ಮೊದಲ ಪರಿಧಿಯಲ್ಲಿನ ಕಸ ತೆಗೆಯಬೇಕು.

ನಂತರ ಸಣ್ಣ ಕ್ಲೇ ಬಾಲ್ ನ್ನು ಇಯರ್ ಫೋನ್ ನ ಬಾಯ್ತುದಿಯ ಒಳಗೆ ಓಡಾಡಿಸಿದರೆ ಮುಕ್ಕಾಲು ಪಾಲು ಕಸ ಅದಕ್ಕೆ ಅಂಟಿಕೊಳ್ಳುತ್ತದೆ. ನಂತರ ಇಯರ್ ಬಡ್ ಮೂಲಕ ಪೂರ್ತಿ ಕ್ಲೀನ್ ಮಾಡಬಹುದು‌.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read