ಅಡುಗೆ ಮನೆ ಟೈಲ್ಸ್‌ ಹೀಗೆ ಶುಚಿಗೊಳಿಸಿ

ಸದಾ ಗಡಿಬಿಡಿಯಲ್ಲಿ ಅಡುಗೆ ಮಾಡುವುದರಿಂದ ಅಡುಗೆ ಮನೆ ಗಲೀಜಾಗುವುದು ಸಹಜ. ಅದರಲ್ಲೂ ಅಡುಗೆ ಮನೆ ಗೋಡೆ ಹಾಗೂ ನೆಲದ ಟೈಲ್ಸ್‌ಗಳು ಬೇಗ ಕೊಳೆಯಾಗುತ್ತವೆ.

ಅಡುಗೆ ಮನೆಯ ಆಕರ್ಷಣೆಯೇ ಅಲಂಕಾರಿಕ ಟೈಲ್ಸ್‌. ಅದನ್ನು ಸ್ವಚ್ಛವಾಗಿಟ್ಟುಕೊಂಡರೆ ಅಡುಗೆ ಮನೆ ಅಂದವಾಗಿ ಕಾಣುತ್ತದೆ.

* ಬಿಸಿ ನೀರಿನೊಂದಿಗೆ ಸ್ವಲ್ಪ ವಿನೆಗರ್‌ ಬೆರೆಸಿ ಟೈಲ್ಸ್‌ಗಳನ್ನು ಒರೆಸಿದರೆ ಟೈಲ್ಸ್‌ ಹೊಳೆಯುತ್ತದೆ.

* ಬಿಸಿ ನೀರಿಗೆ ಕಾಲು ಕಪ್‌ ಅಮೋನಿಯಾ ಸೇರಿಸಿ. ಅದಕ್ಕೆ ಬಟ್ಟೆಯನ್ನು ಅದ್ದಿ ನಂತರ ಟೈಲ್ಸ್‌ ಒರೆಸಿದರೆ ಟೈಲ್ಸ್‌ ಹೊಳೆಯುತ್ತದೆ ಮತ್ತು ಕೀಟಾಣುಗಳು ನಾಶವಾಗುತ್ತವೆ.

* ನೆಲದ ಟೈಲ್ಸ್‌ ನಲ್ಲಿ ಕೊಳೆ ಗಾಢವಾಗಿ ಅಂಟಿಕೊಂಡಿದ್ದರೆ ನೀರಿಗೆ ಕಾಲು ಕಪ್‌ ಬೋರಾಕ್ಸ್‌, ಅರ್ಧ ಕಪ್‌ ವಿನೆಗರ್‌ ಮತ್ತು ಅರ್ಧ ಕಪ್‌ ಅಮೋನಿಯಾ ಹಾಕಿ. ಇದರಿಂದ ಟೈಲ್ಸ್‌ ಒರೆಸಿದರೆ ಟೈಲ್ಸ್‌ ಗೆ ಹೊಳಪು ಬರುತ್ತದೆ.

* ಟೈಲ್ಸ್‌ನಲ್ಲಿ ಹೆಚ್ಚು ಜಿಡ್ಡು ಇದ್ದು ಕಲೆಗಳಾಗಿದ್ದರೆ ಅರ್ಧ ಪ್ರಮಾಣದಷ್ಟು ಬಿಸಿ ನೀರಿಗೆ ಅಷ್ಟೇ ಪ್ರಮಾಣದ ಬೇಕಿಂಗ್‌ ಸೋಡಾ ಹಾಕಿ ಪೇಸ್ಟ್‌ ತಯಾರಿಸಿ. ನಂತರ ಟೂತ್‌ ಬ್ರಷ್‌ ಸಹಾಯದಿಂದ ಪೇಸ್ಟ್‌ ತೆಗೆದುಕೊಂಡು ಜಿಡ್ಡು ಹಾಗೂ ಕಲೆಗಳಿರುವ ಜಾಗದಲ್ಲಿ ಚೆನ್ನಾಗಿ ಉಜ್ಜಿ 10 ನಿಮಿಷ ಹಾಗೆ ಬಿಡಿ. ನಂತರ ಬಿಸಿ ನೀರಿನಿಂದ ಟೈಲ್ಸ್‌ ಒರೆಸಿದರೆ ಕಲೆ ಹಾಗೂ ಜಿಡ್ಡು ಸಂಪೂರ್ಣವಾಗಿ ಹೋಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read