ಸಕ್ಕರೆ ಕಾಯಿಲೆ ಇರುವವರು ಎಳನೀರು ಕುಡಿಯುವುದು ಎಷ್ಟು ಸೂಕ್ತ ? ಇಲ್ಲಿದೆ ತಜ್ಞರ ಸಲಹೆ

ಎಳನೀರು ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಏಕೆಂದರೆ ಇದೊಂದು ನೈಸರ್ಗಿಕ ಪಾನೀಯ. ಟೆಟ್ರಾಪ್ಯಾಕ್ ಅಥವಾ ಬಾಟಲಿಗಳಲ್ಲಿ ಪ್ಯಾಕ್ ಮಾಡಿದ ಜ್ಯೂಸ್ ಮತ್ತು ತಂಪು ಪಾನೀಯಗಳಿಗಿಂತ ಎಳನೀರು ಬಹಳ ಉತ್ತಮ.

ಬೇಸಿಗೆಯಲ್ಲಂತೂ ಎಳನೀರು ಸಂಜೀವಿನಿಯಿದ್ದಂತೆ. ಇದು ನಮ್ಮನ್ನು ಹೈಡ್ರೇಟ್ ಮಾಡುತ್ತದೆ ಮತ್ತು ತ್ವರಿತ ಶಕ್ತಿಯನ್ನು ನೀಡುತ್ತದೆ. ಆದರೆ ಮಧುಮೇಹ ರೋಗಿಗಳು ಎಳನೀರು ಕುಡಿಯಬಹುದೇ ಎಂಬ ಗೊಂದಲ ಅನೇಕರಲ್ಲಿದೆ. ಇದು ಸ್ವಲ್ಪ ಸಿಹಿಯಾಗಿರುವುದರಿಂದ ಸಕ್ಕರೆ ಕಾಯಿಲೆ ಇರುವವರು ಎಳನೀರು ಕುಡಿಯಲು ಭಯಪಡುತ್ತಾರೆ.

ತಜ್ಞರ ಪ್ರಕಾರ ಹಾಲಿಗಿಂತಲೂ ಎಳನೀರಿನಲ್ಲಿ ಹೆಚ್ಚಿನ ಪೋಷಕಾಂಶಗಳು ಕಂಡುಬರುತ್ತವೆ. ಇದರಲ್ಲಿರುವ ಕೊಬ್ಬಿನ ಪ್ರಮಾಣವು ಅತ್ಯಲ್ಪ. ಎಳನೀರನ್ನು ನಿಯಮಿತವಾಗಿ ಸೇವಿಸಿದರೆ ದೇಹಕ್ಕೆ ಬೇಕಾದ ಪೊಟ್ಯಾಸಿಯಮ್, ಸೋಡಿಯಂ, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಉತ್ಕರ್ಷಣ ನಿರೋಧಕಗಳನ್ನು ಪಡೆಯಬಹುದು. ಇದು ದೇಹವನ್ನು ನಿರ್ವಿಷಗೊಳಿಸಿ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಮಧುಮೇಹ ರೋಗಿಗಳು ಎಳನೀರು ಕುಡಿಯಬಹುದೇ ?

ತಜ್ಞರ ಪ್ರಕಾರ ಮಧುಮೇಹ ರೋಗಿಗಳು ಕೂಡ ಎಳನೀರನ್ನು ಕುಡಿಯಬಹುದು. ಪ್ರತಿದಿನ ಇದನ್ನು ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಬಹುದು. ಏಕೆಂದರೆ ಅದರ ಗ್ಲೈಸೆಮಿಕ್ ಇಂಡೆಕ್ಸ್ (ಜಿಐ) ಕಡಿಮೆಯಿರುತ್ತದೆ. ಎಳನೀರಿನಲ್ಲಿ ಇರುವ ಮೆಗ್ನೀಸಿಯಮ್, ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ ದೇಹದಲ್ಲಿನ ನೀರಿನ ಕೊರತೆ ನಿವಾರಣೆಯಾಗಿ ಅದ್ಭುತ ಶಕ್ತಿ ಸಿಗುತ್ತದೆ.

ಸಕ್ಕರೆ ಕಾಯಿಲೆ ಇರುವವರು ಎಳನೀರಿನ ಜೊತೆಗೆ ಅದರಲ್ಲಿರುವ ಗಂಜಿಯನ್ನು ಕೂಡ ಸೇವಿಸಬೇಕು. ಏಕೆಂದರೆ ಇದು ಚಯಾಪಚಯವನ್ನು ಸುಧಾರಿಸಲು ಸಹಾಯ ಮಾಡುವ ಅನೇಕ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಎಳನೀರಿನ ಗಂಜಿ ತಿನ್ನುವುದರಿಂದ ದೇಹದ ಕೊಬ್ಬು ಕರಗುತ್ತದೆ. ಇದರಲ್ಲಿ ಉತ್ತಮ ಕೊಲೆಸ್ಟ್ರಾಲ್ ಇರುವುದರಿಂದ ಹೃದಯ ಕಾಯಿಲೆಗಳ ಅಪಾಯ ಕೂಡ ಕಡಿಮೆಯಾಗುತ್ತದೆ. ಆದರೆ ಎಳನೀರು ಸೇವನೆಗೂ ಮುನ್ನ ತಜ್ಞರ ಸಲಹೆ ಪಡೆಯುವುದು ಸೂಕ್ತ.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read