ʼಟ್ರೇಡ್ ಮಾರ್ಕ್ʼ ಕುರಿತು ನಿಮಗೆಷ್ಟು ಗೊತ್ತು ? ಇಲ್ಲಿದೆ ಇದರ ಸಂಕ್ಷಿಪ್ತ ಮಾಹಿತಿ

ಯಾವುದೇ ವಸ್ತು ಅಥವಾ ತಂತ್ರಜ್ಞಾನವನ್ನು ಉತ್ಪಾದಿಸುವ ವಾಣಿಜ್ಯ ಸಂಸ್ಥೆಗಳು ತಮ್ಮ ಸರಕುಗಳನ್ನು ಗ್ರಾಹಕರು ಸುಲಭವಾಗಿ ಗುರುತಿಸುವುದಕ್ಕಾಗಿ ಟ್ರೇಡ್ ಮಾರ್ಕ್ ಉಪಯೋಗಿಸುತ್ತಾರೆ. ಜಗತ್ತಿನ ಬಹುತೇಕ ವಾಣಿಜ್ಯ ಸಂಸ್ಥೆ, ಕಂಪೆನಿಗಳು ತಮ್ಮದೇ ಆದ ಟ್ರೇಡ್ ಮಾರ್ಕ್  ಹೊಂದಿವೆ.

ಟ್ರೇಡ್‌ಮಾರ್ಕ್ ಮಾಲೀಕರು ಒಬ್ಬ ವ್ಯಕ್ತಿ, ವ್ಯಾಪಾರ ಸಂಸ್ಥೆ ಅಥವಾ ಯಾವುದೇ ಕಾನೂನು ಘಟಕವಾಗಿರಬಹುದು. ಟ್ರೇಡ್‌ಮಾರ್ಕ್ ಪ್ಯಾಕೇಜ್, ಲೇಬಲ್ ಅಥವಾ ಉತ್ಪನ್ನದಲ್ಲಿರುತ್ತದೆ. ಈ ಟ್ರೇಡ್ ಮಾರ್ಕ್ ನಲ್ಲಿ ಎರಡು ವಿಧಗಳಿವೆ. ಒಂದು ನೋಂದಾವಣೆಯಾದ ಟ್ರೇಡ್ ಮಾರ್ಕ್ ಆಗಿದ್ದರೆ ಇನ್ನೊಂದು ನೋಂದಾವಣೆಯಾಗದ ಟ್ರೇಡ್ ಮಾರ್ಕ್.

ಭಾರತದಲ್ಲಿ ಟ್ರೇಡ್‌ಮಾರ್ಕ್ ಉಲ್ಲಂಘನೆಯನ್ನು ಟ್ರೇಡ್‌ಮಾರ್ಕ್ ಕಾಯ್ದೆ 1999 ರ ಸೆಕ್ಷನ್ 29 ರ ಅಡಿಯಲ್ಲಿ ವ್ಯಾಖ್ಯಾನಿಸಲಾಗಿದೆ. ಸರಳವಾಗಿ ಹೇಳುವುದಾದರೆ, ಅನಧಿಕೃತ ವ್ಯಕ್ತಿಯು ಟ್ರೇಡ್‌ಮಾರ್ಕ್ ಅನ್ನು ನೋಂದಾಯಿತ ಟ್ರೇಡ್‌ಮಾರ್ಕ್‌ಗೆ ಹೋಲುವ ಅಥವಾ ಮೋಸಗೊಳಿಸುವಂತೆಯೇ ಬಳಸಿದಾಗ, ಅದನ್ನು ಟ್ರೇಡ್‌ಮಾರ್ಕ್ ಉಲ್ಲಂಘನೆ ಎಂದು ಕರೆಯಲಾಗುತ್ತದೆ. ಎರಡು ಕಂಪನಿ ಒಪ್ಪಂದ ಮಾಡಿಕೊಂಡು ಒಂದೇ ಟ್ರೇಡ್ ಮಾರ್ಕ್ ಬಳಸಬಹುದು. ಇದಕ್ಕೆ ಜಂಟಿ ಮಾಲೀಕರು ಎಂದು ಕರೆಯಲಾಗುತ್ತದೆ.

ಟ್ರೇಡ್ ಮಾರ್ಕ್ ಶಾಶ್ವತವಾಗಿ ಇರುತ್ತದೆ. ಉದ್ಯಮಿಗಳು ಸರಕು ಹಾಗೂ ಸೇವೆಗಳಿಗೆ ಇದನ್ನು ನಿರಂತರವಾಗಿ ಬಳಸುವುದು ಅಗತ್ಯವಾಗಿರುತ್ತದೆ. ಇದು ಹಕ್ಕುಸ್ವಾಮ್ಯ ಮತ್ತು ಪೇಟೆಂಟ್‌ಗಳಿಂದ ಭಿನ್ನವಾಗಿದೆ. ಹಕ್ಕುಸ್ವಾಮ್ಯ ಮತ್ತು ಪೇಟೆಂಟ್ ಮುಕ್ತಾಯ ದಿನಾಂಕಗಳನ್ನು ಹೊಂದಿರುತ್ತದೆ.

ಟ್ರೇಡ್ ಮಾರ್ಕ್ ನಿರ್ಧರಿಸಿದ ನಂತ್ರ ನೋಂದಾಯಿಸಬೇಕು. ಪರೀಕ್ಷೆ ನಂತ್ರ ಇದನ್ನು ಟ್ರೇಡ್ ಮಾರ್ಕ್ ಕಚೇರಿ ಸ್ವೀಕರಿಸಬಹುದು ಅಥವಾ ನಿರಾಕರಿಸಬಹುದು. ಇದಕ್ಕೆ ಒಂದು ವರ್ಷ ತೆಗೆದುಕೊಳ್ಳಬಹುದು. ಈ ಸಮಯದಲ್ಲಿ ಬೇರೆ ವ್ಯಕ್ತಿಗಳು ಈ ಟ್ರೇಡ್ಮಾರ್ಕ್ ಗೆ ಆಕ್ಷೇಪ ಸಲ್ಲಿಸಬಹುದು. ಎಲ್ಲ ಮುಗಿದ ನಂತ್ರ ಟ್ರೇಡ್ ಮಾರ್ಕ್ ಕಚೇರಿ ನೋಂದಣಿ ಪ್ರಮಾಣ ಪತ್ರವನ್ನು ನೀಡಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read