ಮಕ್ಕಳು ಎಷ್ಟು ಸಮಯ ನಿದ್ದೆ ಮಾಡಬೇಕು…..? ಇಲ್ಲಿದೆ ಮಾಹಿತಿ

ಪೂರ್ಣ ನಿದ್ದೆ ಮಾಡುವುದು ಎಲ್ಲ ವಯಸ್ಸಿನವರಿಗೂ ಅತ್ಯವಶ್ಯಕ. ಅದರಲ್ಲೂ ಬೆಳೆಯುತ್ತಿರುವ ಮಕ್ಕಳಿಗೆ ಪೂರ್ಣ ನಿದ್ದೆ ಬೇಕೇಬೇಕು. ಅನೇಕ ಸಂಶೋಧನೆ ಹಾಗೂ ಅಧ್ಯಯನ ಪ್ರಕಾರ ಸಂಪೂರ್ಣ ನಿದ್ದೆಯಿಂದ ಮಕ್ಕಳ ಮೆದುಳಿನ ಬೆಳವಣಿಗೆಯಾಗುತ್ತದೆ ಎಂಬ ಅಂಶ ಗೊತ್ತಾಗಿದೆ.

ಯಾವ ವಯಸ್ಸಿನಲ್ಲಿ ಎಷ್ಟು ನಿದ್ದೆ ಮಾಡಬೇಕು ಎನ್ನುವ ಬಗ್ಗೆ ನಿಮಗೆ ಗೊತ್ತಾ? ಮಕ್ಕಳಿಗೆ ಯಾವ ಸಮಯದಲ್ಲಿ ಎಷ್ಟು ನಿದ್ದೆ ಬೇಕು ಎನ್ನುವುದರ ಬಗ್ಗೆ ಪಾಲಕರು ತಿಳಿದಿರಬೇಕು. ಹುಟ್ಟಿದಾಗಿನಿಂದ 10 ವರ್ಷದವರೆಗಿನ ಮಕ್ಕಳು ಎಷ್ಟು ನಿದ್ದೆ ಮಾಡಬೇಕೆಂದು ನಾವು ಹೇಳ್ತೇವೆ ನೋಡಿ.

ಹುಟ್ಟಿದಾಗಿನಿಂದ ಆರು ತಿಂಗಳ ಶಿಶುವಿಗೆ : ಈ ಸಮಯ ಮಕ್ಕಳ ಅತ್ಯಂತ ಆಹ್ಲಾದಕರ ಸಮಯ. ಈ ಸಮಯದಲ್ಲಿ ಮಗು 16-20 ಗಂಟೆ ನಿದ್ದೆ ಮಾಡಬೇಕು. ಅದಾಗ್ಯೂ ಮಗು ಎಷ್ಟು ಸಮಯ ನಿದ್ದೆ ಮಾಡುತ್ತದೆ ಎನ್ನುವುದು ಅವರ ಅಭ್ಯಾಸವನ್ನವಲಂಬಿಸಿರುತ್ತದೆ.

ಆರರಿಂದ ಹನ್ನೆರೆಡು ತಿಂಗಳ ಮಕ್ಕಳು : ಮಗುವಿನ ಬೆಳವಣಿಗೆ ಸಮಯ ಇದು. ನಡೆದಾಡಲು, ಮಾತನಾಡಲು ಮಕ್ಕಳು ಈ ಸಮಯದಲ್ಲಿ ಕಲಿಯಲಾರಂಭಿಸುತ್ತಾರೆ. ಹಾಗಾಗಿ ಆರರಿಂದ 12 ತಿಂಗಳ ಮಕ್ಕಳಿಗೆ 12-15 ತಾಸು ನಿದ್ದೆಯ ಅವಶ್ಯಕತೆ ಇದೆ.

ಒಂದರಿಂದ ಮೂರು ವರ್ಷದ ಮಕ್ಕಳ ನಿದ್ದೆ : ಈ ವಯಸ್ಸಿನಲ್ಲಿ ಮಕ್ಕಳು ಆ್ಯಕ್ಟೀವ್ ಆಗಿರುತ್ತಾರೆ. ಈ ಮಕ್ಕಳು 13 ತಾಸು ನಿದ್ದೆ ಮಾಡಬೇಕಾಗುತ್ತದೆ.

ಮೂರರಿಂದ ಐದು ವರ್ಷ ವಯಸ್ಸಿನ ಮಕ್ಕಳು : ಈ ವೇಳೆ ಮಕ್ಕಳು ಸಾಮಾಜಿಕವಾಗಿ ಸಕ್ರಿಯರಾಗುತ್ತಾರೆ. ಅವರಿಗೆ 12 ಗಂಟೆಯ ನಿದ್ದೆ ಅವಶ್ಯವಿರುತ್ತದೆ. ಇಲ್ಲವಾದ್ರೆ ಕೆಲವೊಂದು ರೋಗಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.

ಐದರಿಂದ ಹತ್ತು ವರ್ಷದ ಮಕ್ಕಳು : ಮಕ್ಕಳು ದೊಡ್ಡವರಾದಂತೆ ಅವರ ನಿದ್ದೆಯ ಪ್ರಮಾಣ ಕಡಿಮೆಯಾಗುತ್ತ ಬರುತ್ತದೆ. ಯಾಕೆಂದ್ರೆ ಅವರ ದೈನಂದಿನ ಚಟುವಟಿಕೆಗಳು ಜಾಸ್ತಿಯಾಗುತ್ತವೆ. ಆದ್ರೆ ಅವರ ನಿದ್ದೆಯ ಬಗ್ಗೆ ಪಾಲಕರು ಗಮನ ನೀಡುವುದು ಮುಖ್ಯ. ಈ ವಯಸ್ಸಿನ ಮಕ್ಕಳಿಗೆ 10-12 ಗಂಟೆ ನಿದ್ದೆ ಮಾಡಿಸಬೇಕು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read