ಹೇರಳ ಪೌಷ್ಟಿಕಾಂಶಯುಕ್ತ ಡ್ರೈ ಫ್ರೂಟ್ಸ್ ಮಕ್ಕಳಿಗೆ ಕೊಡುವುದು ಎಷ್ಟು ಉತ್ತಮ…?

ಮಕ್ಕಳಿರುವ ಮನೆಗಳಲ್ಲಿ ಸಾಮಾನ್ಯವಾಗಿ ಇದು ಸದಾ ಚರ್ಚೆಯಾಗುತ್ತಿರುವ ಸಂಗತಿ. ಒಣಹಣ್ಣುಗಳಲ್ಲಿ ಪ್ರೊಟೀನ್ ಹೇರಳವಾಗಿರುತ್ತದೆ. ಇಷ್ಟು ಪೌಷ್ಟಿಕಾಂಶಗಳು ಮಕ್ಕಳ ದೇಹಕ್ಕೆ ಬೇಕೇ ಎಂಬುದು ಪ್ರಶ್ನೆ.

ಬಾದಾಮಿ ಮೊದಲಾದ ಒಣಹಣ್ಣುಗಳಲ್ಲಿ ಇರುವ ನಾರಿನಾಂಶ ಮಕ್ಕಳ ದೇಹದಲ್ಲಿ ಜೀರ್ಣವಾಗಲು ಹೆಚ್ಚು ಸಮಯ ಬೇಕಾಗುತ್ತದೆ. ಹಾಗಾಗಿ ಇದನ್ನು ಅತೀಯಾಗಿ ತಿನ್ನುವ ಬದಲು ದಿನಕ್ಕೊಂದು ತಿಂದರೆ ಸಾಕು.

ವಾಲ್ ನಟ್, ಪಿಸ್ತಾಗಳಲ್ಲಿ ಅಧಿಕ ಪ್ರಮಾಣದ ಕ್ಯಾಲ್ಸಿಯಂ ಇರುವುದರಿಂದ ಮಕ್ಕಳ ಮೂಳೆ ಮತ್ತು ಹಲ್ಲಿನ ಬೆಳವಣಿಗೆಗೆ ನೆರವಾಗುತ್ತದೆ. ಆದರೆ ಇದೂ ಕೂಡ ಹೆಚ್ಚು ಸೇವಿಸಬಾರದು ದಿನಕ್ಕೆ ಒಂದರಿಂದ ಎರಡು ಸಾಕು.

ಡ್ರೈ ಫ್ರೂಟ್ಸ್ ಗಳಲ್ಲಿ ಆಂಟಿ ಆಕ್ಸಿಡೆಂಟ್ ಅಂಶವಿದ್ದು ದೈಹಿಕ ಸದೃಢತೆಗೆ ಮತ್ತು ಮಕ್ಕಳ ಅಮೂಲಾಗ್ರ ಬೆಳವಣಿಗೆಗೆ ಬಹಳ ಮುಖ್ಯ. ಸಾಮಾನ್ಯವಾಗಿ ಮಗುವಿಗೆ ಒಂದು ವರ್ಷ ತುಂಬಿದ ಬಳಿಕ ಬೇರೆ ಬೇರೆ ರೂಪದಲ್ಲಿ ಮಕ್ಕಳಿಗೆ ಡ್ರೈ ಫ್ರೂಟ್ಸ್ ತಿನ್ನಿಸಿ. ಇದರಿಂದ ಯಾವುದೇ ಅಡ್ಡ ಪರಿಣಾಮಗಳು ಅಥವಾ ಅಲರ್ಜಿ ಉಂಟಾಗುವುದಿಲ್ಲ. ಅದನ್ನು ಹುಡಿ ಮಾಡಿ ಹಾಲಿನೊಂದಿಗೆ ಅಥವಾ ಇತರ ಆಹಾರದೊಂದಿಗೆ ಕೊಡುವುದು ಅತ್ಯುತ್ತಮ ವಿಧಾನ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read