ಕಾರನ್ನು ತಿನ್ನಬಲ್ಲ ಈ ಬಾಣಸಿಗ: ವೈರಲ್​ ವಿಡಿಯೋಗೆ ನೆಟ್ಟಿಗರು ಸುಸ್ತು

ನೀವು ಎಂದಾದರೂ ನಿಮ್ಮ ನೆಚ್ಚಿನ ಕಾರನ್ನು ತಿನ್ನುವುದನ್ನು ಊಹಿಸಿದ್ದೀರಾ ? ನಾವು ತಮಾಷೆ ಮಾಡುತ್ತಿಲ್ಲ, ಇದು ಅಕ್ಷರಶಃ ಸಾಧ್ಯ ಮತ್ತು ಬಾಣಸಿಗ ಅಮೌರಿ ಗುಯಿಚನ್ ಹಂಚಿಕೊಂಡ ವೀಡಿಯೊವನ್ನು ನೋಡಿದ ನಂತರ ನೀವು ಅದನ್ನು ಒಪ್ಪಿಕೊಳ್ಳಬಹುದು.

ಬಾಣಸಿಗ ಅಮೌರಿ ಅವರು ತಮ್ಮ ಇನ್ಸ್ಟಾಗ್ರಾಮ್ ಪುಟದಲ್ಲಿ ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ. ಚಾಕಲೋಟ್​ನಿಂದ ಅವರು, ನೈಜ ರೀತಿಯ ಹುಂಡೈ IONIQ ಎಲೆಕ್ಟ್ರಿಕ್ ಅನ್ನು ರೂಪಿಸುತ್ತಾರೆ. ಇದನ್ನು ಸಂಪೂರ್ಣವಾಗಿ ಚಾಕೊಲೇಟ್ ಐಟಂನಿಂದ ತಯಾರಿಸಲಾಗಿದ್ದು, ಕಣ್ಣುಗಳನ್ನು ನಂಬಲು ಸಾಧ್ಯವಿಲ್ಲದಂತಿದೆ.

ಪೋಸ್ಟ್ ಮಾಡಿದ ಕೇವಲ ಮೂರು ದಿನಗಳಲ್ಲಿ, ಅಮೌರಿ ಅವರ ‘ಚಾಕೊಲೇಟ್ ಎಲೆಕ್ಟ್ರಿಕ್ ಕಾರ್’ ಇನ್​ಸ್ಟಾಗ್ರಾಮ್​ನಲ್ಲಿ ಆರು ಮಿಲಿಯನ್ ವೀಕ್ಷಣೆಗಳನ್ನು ಕಂಡಿದೆ. ಲಕ್ಷಗಟ್ಟಲೆ ಮಂದಿ ಇದನ್ನು ಇಷ್ಟಪಟ್ಟಿದ್ದಾರೆ.

ಹ್ಯುಂಡೈ ಮೋಟಾರ್ ಇಂಡಿಯಾ ಆಟೋ ಎಕ್ಸ್‌ಪೋ 2023 ರಲ್ಲಿ ತನ್ನ ಆಲ್-ಎಲೆಕ್ಟ್ರಿಕ್ ಮಾಡೆಲ್ ಐಯೋನಿಕ್ 5 ಅನ್ನು ರೂ 44.95 ಲಕ್ಷಕ್ಕೆ ಬಿಡುಗಡೆ ಮಾಡಿದೆ (ಎಕ್ಸ್ ಶೋ ರೂಂ). ಅದನ್ನೇ ಈ ಬಾಣಸಿಗ ನಕಲು ಮಾಡಿದ್ದು, ನೋಡಿದರೆ ಇದು ಥೇಟ್​ ಮೂಲ ಕಾರಿನಂತೆಯೇ ಇದೆ. ನಾನು ನನ್ನ ಕಾರನ್ನು ಸುಲಭವಾಗಿ ತಿನ್ನುತ್ತೇನೆ, ನೀವೂ ತಿನ್ನಬಹುದು ಎಂದು ಬಾಣಸಿಗ ಅಮೌರಿ ತಮಾಷೆ ಮಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read