ಸದಾ ಖುಷಿಯಾಗಿರಲು ʼಗೃಹಿಣಿʼಯರು ಈ ಕೆಲಸ ಮಾಡಿ

ಗೃಹಿಣಿಯಾಗಿ ಮನೆಯಲ್ಲಿ ಕೆಲಸ ಮಾಡುವುದು ಸುಲಭವಲ್ಲ. ಮನೆ, ಮಕ್ಕಳು, ಅಡಿಗೆ ಸೇರಿದಂತೆ ಅನೇಕ ಕೆಲಸಗಳಿರುತ್ತವೆ. ಇದ್ರಿಂದ ಮಹಿಳೆಯರಿಗೆ ಸಮಯ ಸಿಗುವುದಿಲ್ಲ. ಆದ್ರೆ ಈ ಎಲ್ಲದರ ಮಧ್ಯೆಯೇ ಸ್ವಲ್ಪ ಸಮಯವನ್ನು ಅವರಿಗಾಗಿ ಮೀಸಲಿಡಬೇಕಾಗುತ್ತದೆ.

ಇದು ಸ್ವಾರ್ಥವಲ್ಲ. ನಿಮಗೆ ನೀವು ನೀಡುವ ಸಮಯದಿಂದ ಸಾಕಷ್ಟು ಪ್ರಯೋಜನವಿದೆ. ವಿಭಿನ್ನ ಖುಷಿ ನೀಡುವ ಜೊತೆಗೆ ನಿಮ್ಮಲ್ಲಿ ಅಡಗಿರುವ ಪ್ರತಿಭೆ ಹೊರ ಬರಲು ದಾರಿಯಾಗುತ್ತದೆ.

ಉದ್ಯೋಗಿಗಳಲ್ಲದೆ ಹೋದಲ್ಲಿ ಅಥವಾ ಯಾವುದೇ ಸ್ವಂತ ವ್ಯಾಪಾರ ಮಾಡದ ಮಹಿಳೆಯರಿಗೆ ಸ್ವಲ್ಪ ಸಮಯ ಸಿಗುತ್ತದೆ. ಆ ಸಮಯವನ್ನು ಸದುಪಯೋಗ ಮಾಡಿಕೊಳ್ಳಬೇಕು. ಆ ಸಮಯದಲ್ಲಿ ನಿಮಗೆ ಇಷ್ಟವಾದ ಪುಸ್ತಕವನ್ನು ಓದಿ. ಬರೆಯುವ ಹವ್ಯಾಸ ನಿಮಗಿದ್ದರೆ ನೀವು ಕಥೆ, ಕವನ ಸೇರಿದಂತೆ ನಿಮಗೆ ಇಷ್ಟವಾಗುವುದನ್ನು ಬರೆಯಬಹುದು. ಇದು ನಿಮಗೆ ಮಾನಸಿಕ ನೆಮ್ಮದಿಯನ್ನು ನೀಡುತ್ತದೆ.

ನಿಮಗಾಗಿ ಮೀಸಲಿಟ್ಟ ಸಮಯದಲ್ಲಿ ನೀವು ಹೊಸದನ್ನು ಕಲಿಯಬಹುದು. ಹೊಸ ಭಾಷೆ, ಹೊಸ ಹವ್ಯಾಸ, ಹೊಲಿಗೆ, ಕಸೂತಿ ಹೀಗೆ ನಿಮಗೆ ಇಷ್ಟವಾಗುವುದನ್ನು ಕಲಿಯಬಹುದು. ಕಲಿಕೆ ಮುಗಿದ ನಂತ್ರ ಅದನ್ನು ವ್ಯಾಪಾರವಾಗಿಯೂ ನೀವು ಮುಂದುವರೆಸಬಹುದು.

ಸಮಯ ಸಿಕ್ಕಾಗ ನ್ಯೂಸ್ ಪೇಪರ್ ಓದುವುದನ್ನು ರೂಢಿಮಾಡಿಕೊಳ್ಳಿ. ಸದ್ಯ ಜಗತ್ತಿನಲ್ಲಿ ಏನೆಲ್ಲ ಆಗ್ತಿದೆ ಎಂಬುದರ ಮಾಹಿತಿ ನಿಮಗಿರಲಿ. ಇದು ನಿಮಗೆ ಕಾನ್ಫಿಡೆನ್ಸ್ ನೀಡುತ್ತದೆ. ಮೆದುಳಿಗೆ ವ್ಯಾಯಾಮವಾಗುತ್ತದೆ.

ಮನೆ, ಮಕ್ಕಳ ಮಧ್ಯೆ ಫಿಟ್ನೆಸ್ ಮರೆತು ಬಿಡ್ತಾರೆ ಮಹಿಳೆಯರು. ಆದ್ರೆ 30ರ ನಂತ್ರ ಫಿಟ್ನೆಸ್ ಗೆ ಮಹತ್ವ ನೀಡಬೇಕಾಗುತ್ತದೆ. ಚರ್ಮ ಸೌಂದರ್ಯದ ಬಗ್ಗೆ ಗಮನ ನೀಡಿ. ದಿನದ ಸ್ವಲ್ಪ ಸಮಯವನ್ನು ವ್ಯಾಯಾಮಕ್ಕೆ ಮೀಸಲಿಡಿ.

ಇಷ್ಟೇ ಅಲ್ಲ ಸಣ್ಣಪುಟ್ಟ ಕೆಲಸಗಳಿಗೆ ಪತಿಯನ್ನು ಅವಲಂಬಿಸಬೇಡಿ. ಆನ್ಲೈನ್ ನಲ್ಲಿ ಸುಲಭವಾಗಿ ಮಾಡಬಹುದಾದ ಕೆಲಸವನ್ನು ಕಲಿತು ಮಾಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read