ಜಲಂಧರ್: ಮದುವೆಗೆ ನಿರಾಕರಿಸಿದ್ದಕ್ಕೆ ವ್ಯಕ್ತಿಯೊಬ್ಬ ಮಹಿಳೆಯ ಮನೆಗೆ ಬೆಂಕಿ ಹಚ್ಚಿರುವ ಘಟನೆ ಪಂಜಾಬ್ ನ ಜಲಂಧರ್ ನಲ್ಲಿ ನಡೆದಿದೆ.
ಘಟನೆಯಲ್ಲಿ ಮಹಿಳೆ ಹಾಗೂ ಮಕ್ಕಳು ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಲಂಧರ್ ನ ರಾಮ್ ಮಂಡಿ ಹಂತದ 2ನೇ ಏಕ್ತಾ ನಗರದಲ್ಲಿ ಈ ಘಟನೆ ನಡೆದಿದೆ. ಮಹಿಳೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಳು. ವ್ಯಕ್ತಿಯಿಬ್ಬ ತನ್ನನ್ನು ಮದುವೆಯಾಗುವಂತೆ ಹಿಂದೆ ಬಿದ್ದಿದ್ದ. ಅದಕ್ಕೆ ಮಹಿಳೆ ಒಪ್ಪಿರಲಿಲ್ಲ, ಇದೇ ಕಾರಣಕ್ಕೆ ಸೇಡಿಗೆ ಆಕೆಯ ಮನೆಗೆ ಬೆಂಕಿ ಹಚ್ಚಿದ್ದಾನೆ.
ಮಹಿಳೆಯ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿ ಎಲ್ಲರ ಮನೆಗೂ ತರಕಾರಿ ತಂದುಕೊಡುವ ಕೆಲಸ ಮಾಡುತ್ತಿದ್ದ. ಆತ ಮನೆಗೆ ಬಂದು ಮಹಿಳೆ ಬಳಿ ಮದುವೆ ಪ್ರಸ್ತಾಪ ಮಾಡಿದ್ದಾನೆ. ನಿರಾಕರಿಸಿದ ಮಹಿಳೆ ಬೈದಿದ್ದಾಳೆ. ಇಷ್ಟಕ್ಕೆ ಆತ ಸುಮ್ಮನಾಗಿಲ್ಲ. ಇಬ್ಬರ ನಡುವೆ ವಾಗ್ವಾದ, ಜಗಳ ಶುವಾಗಿದೆ. ಮಹಿಳೆ ಕೌರ್ ಆತನ ಕಪಾಳಕ್ಕೆ ಬಾರಿಸಿದ್ದಾಳೆ. ಇದರಿಂದ ಕೋಪಗೊಣ್ಡು ಸ್ಥಳದಿಂದ ತೆರಳಿದ ವ್ಯಕ್ತಿ ಬಳಿಕ ಪೆಟ್ರೋಲ್ ತಂದು ಗೋಡೆ ಮೇಲೆ ಸುರಿದು ಮನೆಗೆ ಬೆಂಕಿ ಹಚ್ಚಿದ್ದಾನೆ.
ರಾಮ್ ಮಂಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.