ಮದುವೆಗೆ ನಿರಾಕರಿಸಿದ್ದಕ್ಕೆ ಮಹಿಳೆಯಿಂದ ಘೋರ ಕೃತ್ಯ: ಪ್ರಿಯಕರನ ಮುಖಕ್ಕೆ ಬಿಸಿ ನೀರು ಎರಚಿ, ಬಾಟಲಿಯಿಂದ ಹಲ್ಲೆ

ಬೆಂಗಳೂರು: ಮದುವೆಗೆ ನಿರಾಕರಿಸಿದ ಪ್ರಿಯಕರನ ಮೇಲೆ ಬಿಸಿ ನೀರು ಎರಚಿ ಹಲ್ಲೆ ಮಾಡಿದ ಘಟನೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಕಲಬುರ್ಗಿ ಜಿಲ್ಲೆಯ ಅಫಜಲಪುರ ಮೂಲದ ಮಹಿಳೆ ಇಂತಹ ಕೃತ್ಯವೆಸಗಿದ್ದಾರೆ. ಕೆಲವು ದಿನಗಳಿಂದ ಭೀಮಾಶಂಕರ ಮತ್ತು ಮಹಿಳೆ ಪ್ರೀತಿಸುತ್ತಿದ್ದರು. ಬಳಿಕ ಮಹಿಳೆಗೆ ಮೊದಲೇ ಮದುವೆಯಾಗಿದೆ ಎಂದು ಗೊತ್ತಾಗಿದೆ. ಮಹಿಳೆಯಿಂದ ಅಂತರ ಕಾಯ್ದುಕೊಳ್ಳಲು ಭೀಮಾಶಂಕರ ಮುಂದಾಗಿದ್ದಾನೆ.

ಅಲ್ಲದೇ ತಾನು ವಾಸವಾಗಿದ್ದ ಬಾಡಿಗೆ ರೂಮ್ ಅನ್ನು ಮಹಿಳೆಗೆ ಬಿಟ್ಟು ಕೊಟ್ಟಿದ್ದಾನೆ. ಈ ನಡುವೆ ಬೇರೆ ಯುವತಿಯೊಂದಿಗೆ ಭೀಮಾಶಂಕರನಿಗೆ ಮದುವೆ ನಿಶ್ಚಯವಾಗಿದೆ. ಊರಲ್ಲಿ ಮದುವೆಯಾಗಿ ಭೀಮಾಶಂಕರ ಪುನಃ ಬೆಂಗಳೂರಿಗೆ ಬಂದಿದ್ದಾನೆ. ಮೇ 25 ರಂದು ಸಂಜೆ ಮಾತನಾಡಬೇಕಿದೆ ಎಂದು ಮಹಿಳೆ ಆತನನ್ನು ರೂಮಿಗೆ ಕರೆಸಿಕೊಂಡಿದ್ದಾಳೆ.

ಮಹಿಳೆ ಬಳಿ ಮದುವೆಯಾದ ವಿಚಾರವನ್ನು ಭೀಮಾಶಂಕರ ಪ್ರಸ್ತಾಪಿಸಿದ್ದಾನೆ. ಸೈಲೆಂಟಾಗಿ ಬಿಸಿ ನೀರು ಕಾಯಿಸಿದ ಮಹಿಳೆ ಅವನಿಗೆ ಗೊತ್ತಾಗದಂತೆ ಮುಖಕ್ಕೆ ಬಿಸಿ ನೀರು ಎರಚಿದ್ದಾಳೆ. ಬಿಯರ್ ಬಾಟಲಿಯಿಂದ ಮುಖಕ್ಕೆ ಹೊಡೆದು ರೂಮ್ ಲಾಕ್ ಮಾಡಿಕೊಂಡು ಪರಾರಿಯಾಗಿದ್ದಾಳೆ.

ತೀವ್ರವಾಗಿ ಗಾಯಗೊಂಡು ಕಿರುಚಾಡುತ್ತಿದ್ದ ಭೀಮಾಶಂಕರನನ್ನು ಮನೆ ಮಾಲೀಕ ಸೈಯ್ಯದ್ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಭೀಮಾಶಂಕರನ ದೇಹದ ಮೇಲೆ ಶೇ. 50 ರಷ್ಟು ಸುಟ್ಟ ಗಾಯಗಳಾಗಿದ್ದು, ಚಾಮರಾಜಪೇಟೆ ಠಾಣೆ ಪೊಲೀಸರಿಗೆ ದೂರು ನೀಡಿದ್ದಾನೆ. ಪೊಲೀಸರು ಪ್ರಕರಣ ದಾಖಕಲಿಸಿಕೊಂಡು ಆರೋಪಿ ಮಹಿಳೆಗಾಗಿ ಹುಡುಕಾಟ ನಡೆಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read