ಹಸಿಹಸಿಯಾಗಿ ಜೀವಂತ ಹಾವು ತಿಂದ ಯುವತಿ; ಶಾಕಿಂಗ್ ವಿಡಿಯೋ ವೈರಲ್

ಹಾವುಗಳ ಬಗ್ಗೆ ಹಲವರಿಗೆ ಭಯವಿದೆ. ಅವುಗಳನ್ನು ಅಚಾನಕ್ಕಾಗಿ ನೋಡಿದರೂ ಸಹ ಬೆಚ್ಚಿ ಬೀಳುವಂತಹ ಜನರಿದ್ದಾರೆ. ಆದರೆ ಕೆಲವರಿಗೆ ಹಾವುಗಳೆಂದರೆ ಭಯವೇ ಇರುವುದಿಲ್ಲ. ಅವುಗಳನ್ನು ಹಿಡಿದು ಆಡವಾಡುತ್ತಾರೆ, ಅವುಗಳನ್ನು ಮೈ ಮೇಲೆ ಬಿಟ್ಟುಕೊಳ್ಳುತ್ತಾರೆ. ಇಷ್ಟೇ ಅಲ್ಲದೇ ಚೀನಾದಿಂದ ವಿಯೆಟ್ನಾಂವರೆಗೆ ಇರುವ ಅನೇಕ ದೇಶಗಳಲ್ಲಿ ಜನರು ತಮ್ಮ ಆಹಾರದಲ್ಲಿ ಹಾವುಗಳನ್ನೂ ಸೇವಿಸುತ್ತಾರೆ.

ಇದೇ ರೀತಿ ಸೌಥ್ ಕೊರಿಯಾ ಯುವತಿಯೊಬ್ಬಳು ಜೀವಂತ ಹಾವನ್ನು ಯಾವುದೇ ಭಯವಿಲ್ಲದೇ ಆರಾಮಾಗಿ ತಿನ್ನುತ್ತಿದ್ದಾಳೆ. ವೈರಲ್ ಕ್ಲಿಪ್‌ನಲ್ಲಿ ಯುವತಿ ಹಸಿ ಹಾವನ್ನು ಜಗಿಯುತ್ತಿರುವುದನ್ನು ಕಾಣಬಹುದು. ಹುಡುಗಿಯ ಮುಂದೆ ಹಾವುಗಳನ್ನು ಇಡಲಾಗಿದ್ದು ಅದರಲ್ಲಿ ಹಸಿರು ತರಕಾರಿಗಳೂ ಇವೆ. ಆಕೆ ಹಾವುಗಳಲ್ಲಿ ಒಂದನ್ನು ತನ್ನ ಕೈಯಲ್ಲಿ ತೆಗೆದುಕೊಂಡು ಅದನ್ನು ಹಸಿಯಾಗಿ ತಿನ್ನಲು ಪ್ರಾರಂಭಿಸುತ್ತಾಳೆ. ಅವಳು ಹಾವಿನ ಮಾಂಸವನ್ನು ತುಂಬಾ ಆರಾಮವಾಗಿ ತಿನ್ನುತ್ತಿದ್ದು ಅದನ್ನು ಆನಂದಿಸಿದ್ದಾಳೆ .

ದಕ್ಷಿಣ ಕೊರಿಯಾದಲ್ಲಿ ವಿಚಿತ್ರ ಆಹಾರಗಳನ್ನು ಸೇವಿಸುವ ಮುಕ್ಬಾಂಗ್ ಎಂಬ ಟಿವಿ ಕಾರ್ಯಕ್ರಮವಿದೆ. ಇದು ಅತ್ಯಂತ ಜನಪ್ರಿಯ ಕಾರ್ಯಕ್ರಮವಾಗಿದ್ದು ಈ ವೀಡಿಯೊ ಬಹುಶಃ ಇದೇ ಕಾರ್ಯಕ್ರಮದ್ದಾಗಿರಬೇಕು ಎಂದು ನಂಬಲಾಗಿದೆ.

ಈ ವಿಡಿಯೋ ವೈರಲ್ ಆಗಿದ್ದು 16 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ. ಹುಡುಗಿ ಹಾವು ತಿಂದಿರುವ ಈ ವಿಡಿಯೋವನ್ನು ಹೆಚ್ಚಿನವರು ಟೀಕಿಸಿದ್ದಾರೆ. ಇಂಥವರಿಂದಾಗಿ ಹೊಸ ಹೊಸ ವೈರಸ್‌ಗಳು ಬರುತ್ತವೆ ಎಂದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read