ಮೈಸೂರು : ಮೈಸೂರಲ್ಲಿ ಘೋರ ದುರಂತ ಸಂಭವಿಸಿದ್ದು, ವಿದ್ಯುತ್ ತಂತಿ ತುಳಿದು ಸ್ಥಳದಲ್ಲೇ ತಾಯಿ-ಮಗ ದುರ್ಮರಣಕ್ಕೀಡಾದ ಘಟನೆ ನಡೆದಿದೆ.
ಮೈಸೂರು ಜಿಲ್ಲೆ ಹುಣಸೂರು ತಾಲೂಕು ಎಮ್ಮೆಕೊಪ್ಪಲು ಗ್ರಾಮದಲ್ಲಿ ಈ ನಡೆದಿದೆ.50 ವರ್ಷದ ನೀಲಮ್ಮ, 19 ವರ್ಷದ ಹರೀಶ್ ಮೃತಪಟ್ಟವರು . ಎಮ್ಮೆಕೊಪ್ಪಲು ಗ್ರಾಮದ ಬಳಿ ಜಮೀನಿನ ಕೆಲಸಕ್ಕೆ ತೆರಳಿದ್ದ ವೇಳೆ ವಿದ್ಯುತ್ ಕಂಬದಿಂದ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೊದಲು ತಾಯಿ ನೀಲಮ್ಮ ಅವರಿಗೆ ವಿದ್ಯುತ್ ತಗುಲಿದೆ. ತಾಯಿ ರಕ್ಷಣೆ ಮಾಡಲು ಹೋದ ಮಗ ಕೂಡ ಬಲಿಯಾಗಿದ್ದಾನೆ. ಹುಣಸೂರು ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
