ಬೆಂಗಳೂರು : ಬೆಂಗಳೂರಿನಲ್ಲಿ ಘೋರ ದುರಂತ ಸಂಭವಿಸಿದ್ದು, ಕಾರ್ಖಾನೆಯ ಲಿಫ್ಟ್ ಗೆ ಸಿಲುಕಿ ಕಾರ್ಮಿಕನೋರ್ವ ಮೃತಪಟ್ಟಿರುವ ಘಟನೆ ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೇಕ್ ತಯಾರಿಸುವ ಕಾರ್ಖಾನೆಯಲ್ಲಿ ಸಾಮಗ್ರಿ ಸಾಗಿಸುವಾಗ ಈ ಘಟನೆ ನಡೆದಿದೆ. ಮೃತರನ್ನು ಬೆಟ್ಟಹಲಸೂರು ನಿವಾಸಿ ಭೂಪೇಂದ್ರ ಚೌಧರಿ (19) ಎಂದು ಗುರುತಿಸಲಾಗಿದೆ.
ಕೇಕ್ ಫ್ಯಾಕ್ಟರಿ ಕಟ್ಟಡದ ಕೆಳ ಮಹಡಿಯಿಂದ 2 ನೇ ಮಹಡಿಗೆ ಬಿಸ್ಕತ್ ತೆಗೆದುಕೊಂಡು ಲಿಫ್ಟ್ ನಲ್ಲಿ ಹೋಗುತ್ತಿದ್ದನು. ಆತ ಕೆಳಗೆ ಬಾಗಿದ್ದರಿಂದ 2 ನೇ ಮಹಡಿಯಲ್ಲಿರುವ ಗೋಡೆ ಆತನ ತಲೆಗೆ ತಗುಲಿದ್ದು, ಗಂಭೀರ ಗಾಯಗೊಂಡ ಯುವಕ ರಕ್ತಸ್ರಾವದಿಂದ ಮೃತಪಟ್ಟಿದ್ದಾನೆ ಎನ್ನಲಾಗಿದೆ.ಈ ಸಂಬಂಧ ಮೃತನ ಸಂಬಂಧಿ ದೂರು ನೀಡಿದ್ದು, ಅದರನ್ವಯ ಲಕ್ಷ್ಮೀ ಬಿ.ಕೆ ಆಂಡ್ ಫ್ಯಾಕ್ಟರಿಯ ಮೇಲ್ವಿಚಾರಕ ರಾಜಶೇಖರ್ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.