ಬಳ್ಳಾರಿ : ಬಳ್ಳಾರಿಯಲ್ಲಿ ಘೋರ ದುರಂತ ಸಂಭವಿಸಿದ್ದು, ಕಸ ಸಂಗ್ರಹಿಸುವ ವಾಹನ ಹರಿದು ಮಗು ಸಾವನ್ನಪ್ಪಿದೆ. ಬಳ್ಳಾರಿ ಮಹಾನಗರ ಪಾಲಿಕೆಗೆ ಸೇರಿದ ಕಸದ ವಾಹನ ಹರಿದು ಈ ದುರ್ಘಟನೆ ಸಂಭವಿಸಿದೆ.
ಸಮರ್ ಮತ್ತು ಶೈಲಜಾ ದಂಪತಿಯ 3 ವರ್ಷದ ಮಗು ವಿಕ್ಕಿ ಮೃತಪಟ್ಟಿದೆ. ಬಳ್ಳಾರಿಯ ಬಾಪೂಜಿ ನಗರದಲ್ಲಿ ಈ ಘಟನೆ ನಡೆದಿದೆ. ಕಸ ಸಂಗ್ರಹಿಸುವ ಬಳ್ಳಾರಿ ಪಾಲಿಕೆ ವಾಹನ ಹರಿದಿದೆ. ಮನೆ ಮುಂದೆ ಆಟವಾಡುತ್ತಿದ್ದ ಮಗುವಿನ ಮೇಲೆ ಕಸದ ವಾಹನ ಹರಿದಿದೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
You Might Also Like
TAGGED:ಬಳ್ಳಾರಿ