BREAKING : ಕೋಲಾರದಲ್ಲಿ ದಾರುಣ ಘಟನೆ : ಕೆರೆಯಲ್ಲಿ ಈಜಲು ಹೋಗಿ ತಂದೆ-ಮಗ ಸೇರಿದಂತೆ ಮೂವರು ಜಲಸಮಾಧಿ.!

ಕೋಲಾರ : ಕೆರೆಯಲ್ಲಿ ಈಜಲು ಹೋಗಿ ತಂದೆ-ಮಗ ಸೇರಿದಂತೆ ಮೂವರು ಜಲಸಮಾಧಿಯಾದ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ವಡ್ಡರಹಳ್ಳಿಯಲ್ಲಿ ನಡೆದಿದೆ.

ಮೃತರನ್ನು ವಾಟರ್ ಮ್ಯಾನ್ ರಮೇಶ್ (40), ಮಗ ಅಗಸ್ತ್ರ (12)ಹಾಗೂ ಮಗನ ಸ್ನೇಹಿತ ಶರಣ್ (15) ಎಂದು ಗುರುತಿಸಲಾಗಿದೆ. ಬೂಡದಮಿಟ್ಟೆ ಕೆರೆಯಲ್ಲಿ ಈ ದುರಂತ ಸಂಭವಿಸಿದೆ. ಘಟನಾ ಸ್ಥಳಕ್ಕೆ ಕೆಜಿಎಫ್ ಎಸ್ ಪಿ ಶಾಂತರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೇತಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕೆರೆಯಲ್ಲಿ ಈಜಲು ಹೋಗಿ ತಂದೆ-ಮಗ ಹಾಗೂ ಸ್ನೇಹಿತ ಸೇರಿದಂತೆ ಮೂವರು ಜಲಸಮಾಧಿಯಾಗಿದ್ದಾರೆ. ಒಬ್ಬರನ್ನೊಬ್ಬರು ಕಾಪಾಡಲು ಹೋಗಿ ಈ ದುರ್ಘಟನೆ ಸಂಭವಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read