ಕೋಲಾರ: ಕೋಲಾರ ತಾಲೂಕಿನ ಹೊಗರಿಗೊಲ್ಲಹಳ್ಳಿ ಗ್ರಾಮದಲ್ಲಿ ಕೃಷಿಹೊಂಡದಲ್ಲಿ ಬಿದ್ದು ತಾಯಿ, ಮಗ ಮೃತಪಟ್ಟಿದ್ದಾರೆ.
30 ವರ್ಷದ ಮಾಲಾ ಮತ್ತು ಅವರ ಪುತ್ರ ಚಕ್ರವರ್ತಿ(6) ಕೃಷಿ ಹೊಂಡದಲ್ಲಿ ಬಿದ್ದು ಮೃತಪಟ್ಟವರು. ಜಾನುವಾರುಗಳಿಗೆ ಮೇವು ತರಲು ಮಾಲಾ ಹೊಲಕ್ಕೆ ತೆರಳಿದ್ದಾರೆ. ಮಗ ಚಕ್ರವರ್ತಿ ಕೂಡ ಜೊತೆಗೆ ಹೋಗಿದ್ದಾನೆ. ಈ ವೇಳೆ ಚಕ್ರವರ್ತಿ ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದಿದ್ದು, ಆತನನ್ನು ರಕ್ಷಿಸಲು ಧಾವಿಸಿದ ಮಾಲಾ ಕೂಡ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸ್ಥಳೀಯರು ಇಬ್ಬರನ್ನು ರಕ್ಷಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ. ಕೋಲಾರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
