ಬೆಂಗಳೂರು : ಇಬ್ಬರು ಮಕ್ಕಳಿಗೆ ವಿಷ ಕುಡಿಸಿ ತಂದೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಹಾರೋಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಡೆದಿದೆ.
ವಿಷ ಸೇವಿಸಿದ್ದ ತಂದೆ ಮೃತಪಟ್ಟಿದ್ದು, ಮಕ್ಕಳಾದ ಯುವವರ್ಧನ್, ಮಿಥುನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪತಿ ಅಶ್ವಥ್ ಕಿರುಕುಳ ತಾಳಲಾರದೇ ಪತ್ನಿ ತವರು ಮನೆ ಸೇರಿದ್ದರು. ನಿನ್ನೆ ಪತ್ನಿ ಮನೆಗೆ ಹೋಗಿದ್ದ ಅಶ್ವಥ್ ಇಬ್ಬರು ಮಕ್ಕಳನ್ನು ಮನೆಗೆ ಕರೆದುಕೊಂಡು ಬಂದಿದ್ದರು. ಬಳಿಕ ಮಕ್ಕಳಿಗೆ ವಿಷ ಕುಡಿಸಿ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದೃಷ್ಟವಶಾತ್ ಮಕ್ಕಳನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .
