ಗುಜರಾತ್ ನಲ್ಲಿ ಭೀಕರ ರಸ್ತೆ ಅಪಘಾತ : 10 ಮಂದಿ ದಾರುಣ ಸಾವು , ಐವರ ಸ್ಥಿತಿ ಗಂಭೀರ

ಅಹ್ಮದಾಬಾದ್: ಗುಜರಾತ್ ನ ಅಹ್ಮದಾಬಾದ್ ನ ಬಾವ್ಲಾ-ಬಗೋದಾರಾ ಹೆದ್ದಾರಿಯಲ್ಲಿ ನಿಂತಿದ್ದ ಟ್ರಕ್ ಗೆ ಮಿನಿ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಮಕ್ಕಳು ಮತ್ತು ಐವರು ಮಹಿಳೆಯರು ಸೇರಿದಂತೆ 10 ಜನರು ಸಾವನ್ನಪ್ಪಿದ್ದಾರೆ.

ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಅಪಘಾತದ ಸ್ಥಳಕ್ಕೆ ತಲುಪಿ. ಅವರು ಮಿನಿ ಟ್ರಕ್ ಚಾಲಕನ ಶವವನ್ನು ವಾಹನದ ಅವಶೇಷಗಳಿಂದ ಹೊರತೆಗೆಯಲು ಪ್ರಯತ್ನಿಸಿದರು. ನಂತರ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದರು.

ವರದಿಗಳ ಪ್ರಕಾರ, ಸುರೇಂದ್ರ ನಗರ ಜಿಲ್ಲೆಯ ಚೋಟಿಲಾ ಮಾತಾ ದೇವಸ್ಥಾನದಿಂದ 13 ಜನರನ್ನು ಕರೆದೊಯ್ಯುತ್ತಿದ್ದ ಪಿಕ್-ಅಪ್ ಮಿನಿ ಟ್ರಕ್ ಹೆದ್ದಾರಿಯಲ್ಲಿ ನಿಲ್ಲಿಸಿದ್ದ ಟ್ರಕ್ ಗೆ ಡಿಕ್ಕಿ ಹೊಡೆದಿದೆ. ಪೊಲೀಸರ ಪ್ರಕಾರ, ಟೈರ್ ಪಂಕ್ಚರ್ ಆದ ಕಾರಣ ಟ್ರಕ್ ಹೆದ್ದಾರಿಯಲ್ಲಿ ನಿಂತಿತ್ತು.ಮೃತರಲ್ಲಿ ಐವರು ಮಹಿಳೆಯರು, ಮೂವರು ಮಕ್ಕಳು ಮತ್ತು ಇಬ್ಬರು ಪುರುಷರು ಸೇರಿದ್ದಾರೆ. ಅಪಘಾತದಿಂದಾಗಿ ಬಾವ್ಲಾ-ಬಗೋದರ ಹೆದ್ದಾರಿಯಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿತ್ತು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read