ಬೆಂಗಳೂರು: ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ ಏಕಸದಸ್ಯ ವಿಚಾರಣಾ ಆಯೋಗದ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ-2025 ರ ಗಣತಿ ಕಾರ್ಯನಿರ್ವಹಿಸಿದ ಮೇಲ್ವಿಚಾರಕರು ಹಾಗೂ ತರಭೇತಿ ನೀಡಿದ ಮಾಸ್ಟರ್ ಮಾಸ್ಟರ್ ಟ್ರೈನರ್‌ಗಳಿಗೆ ಗೌರವಧನ ಬಿಡುಗಡೆ ಮಾಡಲಾಗಿದೆ.
ಪ್ರಸ್ತಾವನೆಯಲ್ಲಿ ವಿವರಿಸಿರುವಂತೆ, ನ್ಯಾಯಮೂರ್ತಿ ಹೆಚ್. ಎನ್. ನಾಗಮೋಹನ್ ದಾಸ್ ಏಕ ಸದಸ್ಯ ವಿಚಾರಣಾ ಆಯೋಗದ ಮಧ್ಯಂತರ ವರದಿಯಲ್ಲಿನ ಶಿಫಾರಸ್ಸಿನಂತೆ ದಿನಾಂಕ: 05-05-2025 ರಿಂದ ದಿನಾಂಕ:06-07-2025 ರವರೆಗೆ ಅಗತ್ಯ ದತ್ತಾಂಶಗಳ ಸಂಗ್ರಹಣೆಗಾಗಿ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ-2025 ರಲ್ಲಿ ಮೇಲ್ವಿಚಾರಕರಾಗಿ ರಾಜ್ಯಾದ್ಯಂತ ಸಮೀಕ್ಷಾ ಕಾರ್ಯನಿರ್ವಹಿಸಿದ ಪ್ರತಿ ಮೇಲ್ವಿಚಾರಕರಿಗೆ ತಲಾ ರೂ.10,000 ಸಂಭಾವನೆಯಂತೆ ಒಟ್ಟು ರೂ.5,22,60,000 ಗಳನ್ನು ಬಿಡುಗಡೆ ಮಾಡಲಾಗಿದೆ.
ಜಿಲ್ಲಾ ಮಟ್ಟದ ಮಾಸ್ಟರ್ ಟೈನರ್ ಗಳಿಗೆ ತಲಾ ರೂ.5,000 ಗಳಂತೆ ರೂ.5,35,000 ಹಾಗೂ ತಾಲ್ಲೂಕು ಮಟ್ಟದ ಮಾಸ್ಟರ್ ಟೈನರ್‌ಗಳಿಗೆ ತಲಾ ರೂ.2,000 ಗಳಂತೆ ರೂ.28,44,000/- ಗಳು ಸೇರಿ ಒಟ್ಟಾರೆ ರೂ.5,56,39,000 ಗಳನ್ನು ಅನುಬಂಧ-3 ರಲ್ಲಿ ಲಗತ್ತಿಸಿರುವ ಜಿಲ್ಲೆಗಳ ಜಂಟಿ/ಉಪ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ರವರ ಸಿ.ಓ ಕೋಡ್‌ಗಳಿಗೆ ಬಿಡುಗಡೆ ಮಾಡಿ ಆದೇಶಿಸಿದೆ.
ಈ ಅನುದಾನವನ್ನು 2025-26 ನೇ ಸಾಲಿನ ಪರಿಶಿಷ್ಟ ಜಾತಿಯವರ ವಿವಿಧ ಅಭಿವೃದ್ಧಿ ಯೋಜನೆ ರಾಜಸ್ವ ಲೆಕ್ಕ ಶೀರ್ಷಿಕೆ:2225-01-796-0-02 (059) ರಡಿ ಜಸ್ಟಿಸ್ ನಾಗಮೋಹನ್ ದಾಸ್ ಆಯೋಗದ ನಿರ್ವಹಣಾ ವೆಚ್ಚ ಮತ್ತು ಒಳ ಮೀಸಲಾತಿ ಸಮೀಕ್ಷಾ ವೆಚ್ಚಕ್ಕೆ ಬಿಡುಗಡೆ ಮಾಡಲಾಗಿರುವ ರೂ.54.00 ಕೋಟಿ ಅನುದಾನದಲ್ಲಿ ಭರಿಸುವುದು ಎಂದು ತಿಳಿಸಲಾಗಿದೆ.

