ಕೊಡಗು: ಫೇಸ್ ಬುಕ್ ನಲ್ಲಿ ಪರಿಚಯಳಾದ ಯುವತಿಗಾಗಿ ಮಡಿಕೇರಿಗೆ ಹೋಗಿದ್ದ ಯುವಕ ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿ, ತಪ್ಪಿಸಿಕೊಳ್ಳಲು ಬೆತ್ತಲಾಗಿ ಹೊರಗೋಡಿ ಬಂದ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.
ಮದ್ದೂರು ಮೂಲದ ಮಹೇಶ್ ಎಂಬಾತ ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿ ತಪ್ಪಿಸಿಕೊಳ್ಳಲು ಬೆತ್ತಲಾಗಿ ರಸ್ತೆಯಲ್ಲಿ ಓಡಿ ಬಂದಿರುವ ಘಟನೆ ನಡೆದಿದೆ. ಮಹೇಶ್ ತನ್ನ ಫೇಸ್ ಬುಕ್ ಗೆಳತಿ ಮಡಿಕೇರಿಯ ಮಂಗಳಾನಗರದ ಹೋಂ ಸ್ಟೇಗೆ ಬರುವಂತೆ ಕರೆದಳೆಂದು ಹೋಗಿದ್ದಾನೆ. ರಾತ್ರಿ ಹೋಂ ಸ್ಟೇನಲ್ಲಿ ಗೆಳತಿಯೊಂದಿಗೆ ತಂಗಿದ್ದ ಮಹೇಶ್ ನನ್ನು ಹನಿಟ್ರ್ಯಾಪ್ ಖೆಡ್ಡಾಗೆ ಕೆಡವಲಾಗಿದೆ. ಯುವತಿಯೊಂದಿಗೆ ಇನ್ನು ಕೆಲವರು ಸೇರಿಕೊಂಡು ಮಹೇಶ್ ನನ್ನು ಬೆತ್ತಲಾಗಿಸಿ ಹಿಗ್ಗಾಮುಗ್ಗಾ ಥಳಿಸಿದ್ದಾರಂತೆ ಅವರಿಂದ ತಪ್ಪಿಸಿಕೊಳ್ಳಲು ಬೆತ್ತಲಾಗಿ ರಸ್ತೆಗೆ ಓಡಿ ಬಂದಿದ್ದಾನೆ.
ಯುವಕ ಬೆತ್ತಲಾಗಿ ಓಡಿ ಬರುತ್ತಿರುವುದನ್ನು ಕಂಡು ಸ್ಥಳೀಯರು ಶಾಕ್ ಆಗಿದ್ದಾರೆ. ಈ ವೇಳೆ ಯುವಕ ತನ್ನ ಸ್ಥಿತಿಯನ್ನು ಹೇಳಿಕೊಂಡಿದ್ದು, ಆತನಿಗೆ ಟವೆಲ್, ಬಟ್ಟೆಯನ್ನು ಸ್ಥಳೀಯರು ನೀಡಿದ್ದಾರೆ. ಹನಿಟ್ರ್ಯಾಪ್ ಗೆ ಒಳಗಾದ ಯುವಕ ಮಡಿಕೇರಿ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ ಎಂದು ತಿಳಿದುಬಂದಿದೆ.
