BIG NEWS: ಹನಿಟ್ರ್ಯಾಪ್ ಪ್ರಕರಣ: SIT ಸೇರಿದಂತೆ ಯಾವುದೇ ತನಿಖೆ ನಡೆಸಲಿ: ಸಚಿವ ಕೆ.ಎನ್.ರಾಜಣ್ಣ

ತುಮಕೂರು: ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವುದು ಸಿಎಂ ಹಾಗೂ ಗೃಹ ಸಚಿವರಿಗೆ ಬಿಟ್ಟ ವಿಚಾರ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.

ತುಮಕೂರಿನಲ್ಲಿ ಮಾತನಾಡಿದ ಸಚಿವರು, ಹನಿಟ್ರ್ಯಾಪ್ ಪ್ರಕರಣ ಸಂಬಂಧ ಎಸ್ಐಟಿ ತನಿಖೆ ಸೇರಿ ಯಾವುದೇ ತನಿಖೆ ಬೇಕಾದರೂ ನಡೆಸಲಿ. ನೋಟಿಸ್ ಕೊಟ್ಟರೆ ಕೊಡಲಿ. ಯಾವ ತನಿಖೆ ಆಗುತ್ತೆ ಆಗಲಿ. ಕೆಲ ವಿಚಾರ ಹೇಳಲು ಆಗಲ್ಲ ಎಂದರು.

ನಮ್ಮ ಪಕ್ಷ, ಬೇರೆ ಪಕ್ಷದವರೂ ಹನಿಟ್ರ್ಯಾಪ್ ಗೆ ಪ್ರಯತ್ನ ಮಾಡಿರಬಹುದು. ಬೆಂಗಲುರು, ಮುಂಬೈನವರೂ ಇರಬಹುದು. ರಾಜಕಿಯೇತರ ವ್ಯಕ್ತಿಗಳು ಮಾಡಿರಬಹುದು. ಯಾರೇ ಮಾಡಿದರೂ ಖಂಡನಾರ್ಹ. ಕಾನೂನುಬಾಹಿರ ಕ್ರಮಕ್ಕೆ ಕುಮ್ಮಕ್ಕ್ಯ್ ನೀಡಿದವರಿಗೆ, ಪ್ರಯತ್ನಿಸಿದವರಿಗೆ ದೇವರು ಒಳ್ಲೆಯದು ಮಾಡಲ್ಲ ಅಂತವರು ಸಾರ್ವಜನಿಕ ಜೀವನದಲ್ಲಿ ಇರಬಾರದು ಎಂದು ಕಿಡಿಕಾರಿದರು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read