BIG NEWS: ಡೇಟಿಂಗ್ ಆಪ್ ಮೂಲಕ ಟೆಕ್ಕಿಯನ್ನು ಹನಿಟ್ರ್ಯಾಪ್ ಖೆಡ್ಡಾಗೆ ಕೆಡವಿದ್ದ ಗ್ಯಾಂಗ್: 6 ಆರೋಪಿಗಳು ಅರೆಸ್ಟ್

ಬೆಂಗಳೂರು: ಟೆಕ್ಕಿಯೊಬ್ಬರನ್ನು ಹನಿಟ್ರ್ಯಾಪ್ ಖೆಡ್ಡಾಗೆ ಕೆಡವಿ ಲಕ್ಷ ಲಕ್ಷ ಹಣ ದೋಚಿದ್ದ ಗ್ಯಾಂಗ್ ನ್ನು ಬೆಂಗಳೂರಿನ ಯಲಹಂಕ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಶರಣಬಸಪ್ಪ, ರಾಜ್ಯ್ ಮಾನೆ, ಶ್ಯಾಮ್ ಸುಂದರ್, ಅಭಿಷೇಕ್ , ಬೀರಬಲ್ ಹಾಗೂ ಸಂಗೀತಾ ಎಂದು ಗುರುತಿಸಲಾಗಿದೆ. ಪಂಬಲ್ ಎಂಬ ಡೇಟಿಂಗ್ ಆಪ್ ನಲ್ಲಿ ಪರಿಚಯವಾದ ಸಂಗೀತಾ ಎಂಬ ಯುವತಿ ಟೆಕ್ಕಿ ರಾಕೇಶ್ ರೆಡ್ಡಿ ಎಂಬಾತನನ್ನು ಬಲಗೆ ಬೀಳಿಸಿಕೊಂಡಿದ್ದಳು. ಪರಿಚಯದ ಮೂಲಕ ರೀಮಿಗೆ ಕರೆದೊಯ್ದು ಮದ್ಯಪಾನ ಮಾಡಿದ್ದಳು. ಈ ಉಳಿದ ಆರೋಪಿಗಳು ಎಂಟ್ರಿ ಕೊಟ್ಟಿದ್ದರು.

ಯುವತಿ ಸಂಗೀತಾ ಅದಾಗಲೇ ಬ್ಯಾಗ್ ನಲ್ಲಿ ಬೇಕಿಂಗ್ ಸೋಡಾ ಇಟ್ಟುಕೊಂಡಿದ್ದಳು, ಪರಿಶೀಲನೆ ನೆಪದಲ್ಲಿ ಆರೋಪಿಗಳು ಸೋಡಾ ತೋರಿಸಿ ಇದು ಡ್ರಗ್ಸ್ ಎಂದು ಬೆದರಿಸಿದ್ದಾರೆ. ಡ್ರಗ್ಸ್ ಪಾರ್ಟಿ ಮಾಡುತ್ತಿದ್ದೀರಾ? ಎಂದು ಹೆದರಿಸಿ ಈ ಬಗ್ಗೆ ಪೊಲೀಸರಿಗೆ ದೂರು ಕೊಡುತ್ತೇವೆ ಎಂದು ಟೆಕ್ಕಿಯನ್ನು ಹೆದರಿಸಿದ್ದಾರೆ. ಡ್ರಗ್ಸ್ ಆರೋಪ ಮಾಡಿ ರಾಕೇಶ್ ರೆಡ್ಡಿಯಿಂದ 2 ಲಕ್ಷ ಹಣ ವಸೂಲಿ ಮಾಡಿದ್ದಾರೆ.

ಹಣ ಕಳೆದುಕೊಂಡು ತಪ್ಪಿಸಿಕೊಂಡು ಬಂದ ರಾಕೇಶ್, ಯಲಹಂಕ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಹನಿಟ್ರ್ಯಾಪ್ ಗ್ಯಾಂಗ್ ನ ಆರು ಆರೋಪಿಗಳನ್ನು ಬಂಧಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read