ಸೂಕ್ಷ್ಮ ಚರ್ಮದವರು ಮನೆಯಲ್ಲೇ ಮಾಡಿ ನೈಸರ್ಗಿಕ ಫೇಶಿಯಲ್

ಬಹುತೇಕ ಮಹಿಳೆಯರು ಕೆಲಸದಲ್ಲಿ ನಿರತರಾಗಿರುವುದರಿಂದ ಚರ್ಮದ ಆರೈಕೆ ಬಗ್ಗೆ ಗಮನ ನೀಡುವುದಿಲ್ಲ. ಇದರಿಂದಾಗಿ ಚರ್ಮ ನಿರ್ಜೀವ, ಶುಷ್ಕ, ಕಪ್ಪು ಮತ್ತು ಸಡಿಲವಾಗುತ್ತದೆ. ಚರ್ಮಕ್ಕೆ ವಿಶೇಷ ಕಾಳಜಿ ಅಗತ್ಯವಿದೆ. ಅನೇಕ ಮಹಿಳೆಯರು ಸೂಕ್ಷ್ಮ ಚರ್ಮವನ್ನು ಹೊಂದಿರುತ್ತಾರೆ. ಈ ಕಾರಣದಿಂದಾಗಿ ರಾಸಾಯನಿಕ ತುಂಬಿದ ಉತ್ಪನ್ನಗಳ ಫೇಶಿಯಲ್‌ ಚರ್ಮವನ್ನು ಹಾನಿಗೊಳಿಸುತ್ತದೆ. ಪಾರ್ಲರ್ ವೆಚ್ಚವೂ ಹೆಚ್ಚಾಗುತ್ತದೆ. ನೈಸರ್ಗಿಕ ವಸ್ತುಗಳೊಂದಿಗೆ ಮನೆಯಲ್ಲಿ ಫೇಶಿಯಲ್ ಮಾಡಬಹುದು.

ಹಾಲಿನ ಫೇಶಿಯಲ್ ಮಾಡಬಹುದು. ಇದು ಶುಷ್ಕತೆ, ಕಲೆಗಳು, ಡಾರ್ಕ್ ಸರ್ಕಲ್ ಇತ್ಯಾದಿಗಳನ್ನು ಕಡಿಮೆ ಮಾಡುತ್ತದೆ. ಮುಖವನ್ನು ನೀರಿನಿಂದ ತೊಳೆಯಿರಿ. ನಂತ್ರ ಹಾಲನ್ನು ಹತ್ತಿಯಲ್ಲಿ ಅದ್ದಿ ಮುಖ ಮತ್ತು ಕುತ್ತಿಗೆಗೆ ಹಚ್ಚಿ. ನಿಧಾನವಾಗಿ ಮಸಾಜ್ ಮಾಡಿ. ಒಣಗಿದ ನಂತರ ಮುಖವನ್ನು ತೊಳೆಯಿರಿ.

ನಿಂಬೆ ಸಿಪ್ಪೆಯನ್ನು ಸ್ಕ್ರಬ್ ಆಗಿ ಬಳಸಬಹುದು. ಇದು ಸತ್ತ ಚರ್ಮದ ಕೋಶಗಳನ್ನು ತೆರವುಗೊಳಿಸಲು ಮತ್ತು ಹೊಸ ಚರ್ಮವನ್ನು ತರಲು ಸಹಾಯ ಮಾಡುತ್ತದೆ.  ಒಂದು ಬಟ್ಟಲಿನಲ್ಲಿ ಅಗತ್ಯವಿರುವಂತೆ 1 ದೊಡ್ಡ ನಿಂಬೆ ಸಿಪ್ಪೆ ಪುಡಿ, 1/4 ಚಮಚ ಅಡಿಗೆ ಸೋಡಾ, ರೋಸ್ ವಾಟರ್ ಸೇರಿಸಿ ಪೇಸ್ಟ್ ಮಾಡಿ. ಇದನ್ನು ಮುಖಕ್ಕೆ ಹಚ್ಚಿ 5-7 ನಿಮಿಷಗಳ ಕಾಲ ಸ್ಕ್ರಬ್ ಮಾಡಿ. ನಂತರ ಮುಖವನ್ನು ಶುದ್ಧ ನೀರಿನಿಂದ ತೊಳೆಯಿರಿ.

ಜೇನುತುಪ್ಪ ವಯಸ್ಸನ್ನು ಮುಚ್ಚಿಡುತ್ತದೆ. ಇದು ಬ್ಯಾಕ್ಟೀರಿಯಾ ವಿರೋಧಿಯಾಗಿದೆ. ಮುಖ ಮತ್ತು ಕುತ್ತಿಗೆಯನ್ನು ಜೇನುತುಪ್ಪದಿಂದ ಮಸಾಜ್ ಮಾಡಿ. ನಂತರ 10 ರಿಂದ 15 ನಿಮಿಷಗಳ ಕಾಲ ಬಿಟ್ಟು ಶುದ್ಧ ನೀರಿನಿಂದ ತೊಳೆಯಿರಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read