ವಸತಿರಹಿತ ಬಡವರಿಗೆ ಸಿಹಿ ಸುದ್ದಿ: ಶೀಘ್ರವೇ ಸಿಂಗಲ್ ಬೆಡ್ ರೂಂ ಮನೆ ಹಂಚಿಕೆ

ಬೆಂಗಳೂರು: ಆರ್ಥಿಕವಾಗಿ ಹಿಂದುಳಿದ ವಸತಿ ರಹಿತ ಬಡವರಿಗೆ ಬೆಂಗಳೂರು ಸುತ್ತಮುತ್ತ ಮುಖ್ಯಮಂತ್ರಿಗಳ ಬಹು ಮಹಡಿ ವಸತಿ ಯೋಜನೆಯಡಿ ರಾಜೀವ್ ಗಾಂಧಿ ವಸತಿ ನಿಗಮದಿಂದ ನಿರ್ಮಾಣ ಮಾಡುತ್ತಿರುವ ಸಿಂಗಲ್ ಬೆಡ್ ರೂಂನ ಸುಮಾರು 4000 ಫ್ಲ್ಯಾಟ್, ಮನೆಗಳು ಸಿದ್ಧವಾಗಿದ್ದು, ಮೂರ್ನಾಲ್ಕು ತಿಂಗಳಲ್ಲಿ ವಾಸಕ್ಕೆ ಲಭ್ಯವಾಗಲಿವೆ.

ನೀರಿನ ಸಂಪರ್ಕ, ವಿದ್ಯುತ್ ಸೇರಿದಂತೆ ಇನ್ನಿತರ ಅಂತಿಮ ಹಂತದ ಕಾಮಗಾರಿ ಬಾಕಿ ಉಳಿದಿದ್ದು, ಎಲ್ಲವನ್ನು ಪೂರ್ಣಗೊಳಿಸಿ ನಿಗದಿತ ಶುಲ್ಕ ಪಾವತಿಸುವ ಅರ್ಜಿದಾರರಿಗೆ ಫ್ಲ್ಯಾಟ್ ಬೀಗ ಹಸ್ತಾಂತರಿಸಲು ವಸತಿ ನಿಗಮ ಮುಂದಾಗಿದೆ.

ಮಹದೇವಪುರ, ಆನೇಕಲ್, ಯಲಹಂಕ, ಬೆಂಗಳೂರು ದಕ್ಷಿಣ, ದಾಸರಹಳ್ಳಿ, ಕೆಆರ್ ಪುರ, ಯಶವಂತಪುರ ವಿಧಾನಸಭಾ ಕ್ಷೇತ್ರಗಳಲ್ಲಿ ರಾಜೀವ್ ಗಾಂಧಿ ವಸತಿ ನಿಗಮದಿಂದ ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ.

ಪೂರ್ಣಗೊಂಡ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರ ಮಾಡಲಾಗುವುದು. ಈ ಯೋಜನೆಗೆ ಸರ್ಕಾರದಿಂದಲೇ ಜಮೀನು ಒದಗಿಸಲಾಗಿದೆ. ಮೂಲ ಸೌಕರ್ಯ ಸೇರಿ ಫ್ಲ್ಯಾಟ್ ದರ 11.20 ಲಕ್ಷ ರುಪಾಯಿ ನಿಗದಿಪಡಿಸಿದ್ದು, ಎಸ್ಸಿ ಎಸ್ಟಿ ಸಮುದಾಯಗಳಿಗೆ ಸರ್ಕಾರದಿಂದ 3.50 ಲಕ್ಷ ರೂ. ಸಬ್ಸಿಡಿ, ಸಾಮಾನ್ಯ ವರ್ಗದವರಿಗೆ 2.70 ಲಕ್ಷ ರೂಪಾಯಿ ಸಬ್ಸಿಡಿ ನೀಡಲಾಗುತ್ತದೆ.

ಮುಂಗಡವಾಗಿ ಫ್ಲ್ಯಾಟ್ ಬುಕ್ ಮಾಡಿ ಮುಂಗಡ ಠೇವಣಿ ಇಟ್ಟಿರುವ ಅರ್ಜಿದಾರರಿಗೆ ರಾಜ್ಯ ಸರ್ಕಾರ ಮತ್ತೆ ಒಂದು ಲಕ್ಷ ರೂ. ಕಡಿತಗೊಳಿಸಿದ್ದು, ಫ್ಲ್ಯಾಟ್ ದರ ಅಂತಿಮವಾಗಿ ಪರಿಶಿಷ್ಟ ಜಾತಿ, ಪಂಗಡ ಸಮುದಾಯದವರಿಗೆ 6.7 ಲಕ್ಷ ರೂಪಾಯಿ, ಸಾಮಾನ್ಯ ವರ್ಗದವರಿಗೆ 7.50 ಲಕ್ಷ ರೂ. ಆಗಲಿದೆ. ಅರ್ಜಿದಾರರು ಪಡಿತರ ಚೀಟಿ ಹೊಂದಿದ್ದು ಕುಟುಂಬದ ವಾರ್ಷಿಕ ಆದಾಯ ಮೂರು ಲಕ್ಷ ಮಿತಿಯಲ್ಲಿರಬೇಕು. ಯೋಜನೆಯಲ್ಲಿ ಒತ್ತು 46,499 ಮನೆಗಳನ್ನು ನಿರ್ಮಿಸಲಾಗುವುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read