ಬೆಂಗಳೂರು: ಬೆಂಗಳೂರಿನ ಬಿಟಿಎಂ ಲೇಔಟ್ ನಲ್ಲಿ ಯುವತಿ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಬೆಂಗಳೂರು ದೊಡ್ದ ಸಿಟಿ. ಅಲ್ಲೊಂದು ಇಲ್ಲೊಂದು ಇಂತಹ ಘಟನೆಗಳು ನಡೆಯುತ್ತಿರುತ್ತವೆ ಎಂದು ಹೇಳುವ ಮೂಲಕ ಮತ್ತೊಮ್ಮೆ ಬೇಜವಾಬ್ದಾರಿ ಹೇಳಿಕೆ ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್. ಬೆಂಗಳೂರು ಸಕಷ್ಟು ದೊಡ್ಡ ಸಿಟಿ. ಅಲ್ಲಲ್ಲಿ ಇಂತಹ ಘಟನೆಗಳು ನಡೆಯುತ್ತುರುತ್ತವೆ ಎಂದು ಉಡಾಫೆಯಾಗಿ ಮಾತನಾಡಿದ್ದಾರೆ.
ಇಲ್ಲಿ ಪ್ರತಿ ದಿನ ಪೊಲೀಸ್ ಕಮಿಶನರ್ ಎಚ್ಚರಿಕೆಯಿಂದ ಇರಬೇಕು. ಬೀಟ್ ವ್ಯವಸ್ಥೆಯನ್ನು ಸರಿಯಗೈ ಮಾಡಬೇಕು. ಪ್ರತಿ ಏರಿಯಾ ಮಾನಿಟರ್ ಮಾಡಬೇಕು. ಪೆಟ್ರೋಲಿಂಗ್ ವ್ಯವಸ್ಥೆ ಸರಿಯಾಗಿ ಮಾಡಬೇಕು. ಶಿಸ್ತಿನಿಂದ ಇರಬೇಕು ಈ ಬಗ್ಗೆ ನಿತ್ಯವೂ ನಾನು ಸೂಚನೆ ಕೊಡುತ್ತೇನೆ ಎಂದರು.
ಆದರೂ ಅಲ್ಲೊಂದು ಇಲ್ಲೊಂದು ಇಂತಹ ಘಟನೆಗಳಾದಾಗ ಜನರ ಮನಸ್ಸಿನಲ್ಲಿ ಸ್ವಾಅಭಾವಿಕವಾಗಿ ಗಮನಸೆಳೆಯುತ್ತದೆ. ನಿರಂತರವಾಗಿ ಪೊಲೀಸ್ ಇಲಾಖೆ, ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಬೆಂಗಳೂರು ಶಾಂತವಾಗಿದೆ. ಅಲ್ಲೊಂದು ಇಲ್ಲೊಂದು ಘಟನೆಗಳಾದಾಗ ಸುಮ್ಮನೆ ಇರಲ್ಲ. ಈ ಬಗ್ಗೆಯೂ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.