ರಾಯಚೂರು : ಲಂಚ ಸ್ವೀಕರಿಸುತ್ತಿದ್ದ ಹೋಮ್ ಗಾರ್ಡ್ ಕಮಾಂಡೆಂಟ್ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ರಾಯಚೂರಿನಲ್ಲಿ ನಡೆದಿದೆ.
ಹೋಂಗಾರ್ಡ್ ಕೆಲಸಕ್ಕೆ ನಿಯೋಜಿಸಲು 6 ಸಾವಿರ ಲಂಚ ಸ್ವೀಕರಿಸುವ ವೇಳೆ ಹೋಂ ಗಾರ್ಡ್ ಕಮಾಂಡೆಂಡ್ ಜಂಬಣ್ಣ ರಾಮಸ್ವಾಮಿ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಮಾರಪ್ಪ ಎಂಬುವವರನ್ನು ಹೋಂಗಾರ್ಡ್ ಕೆಲಸಕ್ಕೆ ನಿಯೋಜಿಸಲು ಲಂಚಕ್ಕೆ ಬೇಡಿಕೆಯೊಡ್ಡಿದ್ದಾರೆ. 10,000 ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಅಂತೆಯೇ 6,000 ಲಂಚ ಪಡೆಯುವಾಗ ಜಂಬಣ್ಣ ರಾಮಸ್ವಾಮಿ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ ಎಸ್ ಪಿ ಸತೀಶ್ ಚಿಡಗುಬ್ಬಿ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಸದ್ಯ ಜಂಬಣ್ಣ ರಾಮಸ್ವಾಮಿಯನ್ನು ವಶಕ್ಕೆ ಪಡೆದ ಲೋಕಾಯುಕ್ತ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
You Might Also Like
TAGGED:ಹೋಮ್'ಗಾರ್ಡ್