ಅಚ್ಚರಿಯಾದರೂ ಇದು ನಿಜ….! ಸೇಡು ತೀರಿಸಿಕೊಳ್ಳಲು ಪತ್ನಿ ಪ್ರಿಯಕರನ ಹೆಂಡತಿಯನ್ನೇ ಮದುವೆಯಾದ ಪತಿ

ಒಂದು ವಿಲಕ್ಷಣ ಘಟನೆಯಲ್ಲಿ ವಿವಾಹಿತ ಮಹಿಳೆಯೊಬ್ಬಳು ಇನ್ನೊಬ್ಬ ಪುರುಷನೊಂದಿಗೆ ಓಡಿಹೋದರೆ, ಆ ಪ್ರಿಯಕರನ ಪತ್ನಿಯನ್ನು ಪ್ರಿಯತಮೆಯ ಪತಿ ಮದುವೆಯಾಗಿರುವ ವಿದ್ಯಾಮಾನ ಬಿಹಾರದ ಖಗರಿಯಾ ಜಿಲ್ಲೆಯಲ್ಲಿ ನಡೆದಿದೆ.

ಪತ್ನಿ ಮತ್ತು ಆಕೆಯ ಪ್ರೇಮಿಯ ವಿರುದ್ಧ ಸೇಡು ತೀರಿಸಿಕೊಳ್ಳಲು ಇಬ್ಬರೂ ಮದುವೆಯಾಗಿರುವುದಾಗಿ ವರದಿಯಾಗಿದೆ.

ರೂಬಿ ದೇವಿ ಎಂಬ ಮಹಿಳೆ 2009 ರಲ್ಲಿ ನೀರಜ್ ಎಂಬ ವ್ಯಕ್ತಿಯೊಂದಿಗೆ ಮದುವೆಯಾಗಿದ್ದಳು. ದಂಪತಿಗೆ ನಾಲ್ಕು ಮಕ್ಕಳಿದ್ದಾರೆ. ಆದಾಗ್ಯೂ, ಕೆಲವು ವರ್ಷಗಳ ನಂತರ, ಆಕೆ ಮುಖೇಶ್ ಎಂಬ ವ್ಯಕ್ತಿಯೊಂದಿಗೆ ವಿವಾಹೇತರ ಸಂಬಂಧವನ್ನು ಹೊಂದಿದ್ದಳು. ಇಬ್ಬರೂ ಓಡಿಹೋದ ಬಳಿಕ ರೂಬಿಯ ಪತಿ ದೂರು ದಾಖಲಿಸಿದ್ದರು.

ಪಂಚಾಯಿತಿ ಕರೆದು ರಾಜಿ ಮಾಡಿದ್ದರೂ ಆಕೆ ಪತಿಯ ಜೊತೆ ಬಾಳಲು ಒಪ್ಪಿರಲಿಲ್ಲ. ಈ ಸೇಡಿನಿಂದ ಪ್ರಿಯಕರನ ಪತ್ನಿಯನ್ನು ರೂಬಿ ಗಂಡ ಮದುವೆಯಾಗಿದ್ದಾನೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read