ಚಿತ್ರದುರ್ಗ: ತಾಲೂಕು ಆಸ್ಪತ್ರೆಯ ಮೇಲ್ಛಾವಣಿ ಸಿಮಿಂಟ್ ಕುಸಿದು ಬಿದ್ದು ಬಾಣಂತಿ ಗಾಯಗೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ನಡೆದಿದೆ.
ಹಿರಿಯೂರು ತಾಲೂಕು ಆಸ್ಪತ್ರೆಯ ಮೇಲ್ಛಾವಣಿ ಸಿಮಿಂಟ್ ಏಕಾಏಕಿ ಕುಸಿದು ಬಿದ್ದಿದೆ. ಹೆರಿಗೆ ವಾರ್ಡ್ ನ ಬೆಡ್ ಮೇಲೆ ಕುಸಿತಗೊಂಡಿದ್ದು, ಬಾಣಂತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತಾಲೂಕು ಆಸ್ಪತ್ರೆಯ ಮೇಲ್ಛಾವಣಿ ಕುಸಿಯುವ ಹಂತಕ್ಕೆ ಬಂದರೂ ಆಸ್ಪತ್ರೆಯ ಅಧಿಕಾರಿಗಳಾಗಲಿ, ವೈದ್ಯರಾಗಲಿ ಈ ಬಗ್ಗೆ ಗಮನಹರಿಸದೇ ನಿರ್ಲಕ್ಷ್ಯ ಧೋರಣೆ ತಾಳಿದ್ದು, ರೋಗಿಗಳು ಜೀವ ಕೈಯಲ್ಲಿ ಹಿಡಿದು ಆಸ್ಪತ್ರೆಗೆ ಬರಬೇಕಾದ ಸ್ಥಿತಿ ಎದುರಾಗಿದೆ.
