ರಾಜ್ಯದಲ್ಲಿ ಮತ್ತೆ ʻಧರ್ಮ ದಂಗಲ್ʼ ಸದ್ದು : ಅನ್ಯಧರ್ಮೀಯರ ವ್ಯಾಪಾರ ನಿಷೇಧಕ್ಕೆ ಹಿಂದೂ ಸಂಘಟನೆಗಳ ಒತ್ತಾಯ

ವಿಜಯಪುರ : ರಾಜ್ಯದಲ್ಲಿ ಮತ್ತೆ ಧರ್ಮ ದಂಗಲ್‌ ಶುರುವಾಗಿದ್ದು, ವಿಜಯಪುರದಲ್ಲಿ ಶ್ರೀ ಸಿದ್ದೇಶ್ವರ ಜಾತ್ರೆಯಲ್ಲಿ ಮುಸ್ಲಿಂ ಸಮುದಾಯದವರಿಗೆ ವ್ಯಾಪಾರ ಮಾಡಲು ಅವಕಾಶ ನೀಡಬಾರದು ಎಂದು ಹಿಂದೂ ಪರ ಸಂಘಟನೆಗಳು ಒತ್ತಾಯಿಸಿವೆ.

ವಿಜಯಪುರದ ಶ್ರೀ ಸಿದ್ದೇಶ್ವರ ದೇವಸ್ಥಾನದ ಜಾತ್ರೆ ಮಕರ ಸಂಕ್ರಮಣ ಕಾಲದಲ್ಲಿ ನಡೆಯುತ್ತದೆ. 2024ರ ಮಕರ ಸಂಕ್ರಾಂತಿ ಸಮಯದಲ್ಲಿ ನಡೆಯೋ ಸಿದ್ದೇಶ್ವರ ಜಾತ್ರೆಗೆ ಸಿದ್ದತೆಗಳು ಆರಂಭವಾಗಿವೆ. ಈ ನಡುವೆ  ಸಿದ್ದೇಶ್ವರ ಜಾತ್ರೆಯಲ್ಲಿ ಮುಸ್ಲಿಂ ಸಮುದಾಯದವರಿಗೆ ಅವಕಾಶ ನೀಡಬಾರದು ಎಂದು ಶ್ರೀರಾಮ ಸೇನೆ ಹಾಗೂ ಇತರ ಹಿಂದೂ ಪರ ಸಂಘಟನೆಗಳು ಆಗ್ರಹಿಸಿವೆ.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ  ಅವರಿಗೆ ಸಿದ್ದೇಶ್ವರ ಜಾತ್ರೆಯಲ್ಲಿ ಮುಸ್ಲಿಮರಿಗೆ ಅವಕಾಶ ನೀಡಬಾರದು ಎಂದು ಎಲ್ಲಾ ಹಿಂದೂ ಪರ ಸಂಘಟನೆಗಳು ಮನವಿ ಸಲ್ಲಿಸುತ್ತೇವೆ. ಅವರೂ ಸಹ ನಮ್ಮ ಬೇಡಿಕೆಗೆ ಸ್ಪಂದಿಸುತ್ತಾರೆಂಬ ಭರವಸೆ ಇದೆ  ಎಂದು ಹಿಂದೂಪರ ಸಂಘಟನೆಯ ಮುಖಂಡರು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read