BREAKING: ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ: ಹಠಾತ್ ಪ್ರವಾಹಕ್ಕೆ ಕೊಚ್ಚಿ ಹೋದ ಜನರು: ಹಲವರು ನಾಪತ್ತೆ

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ ಸಂಭವಿಸಿದೆ. ಕಾಂಗ್ರಾ ಹಾಗೂ ಕುಲ್ಲು ಜಿಲ್ಲೆಗಳಲ್ಲಿ ಭೀಕಪ ಪ್ರವಾಹ ಸಂಭವಿಸಿದ್ದು, ನೀರಿನ ರಭಸಕ್ಕೆ ಜನರು ಕೊಚ್ಚಿ ಹೋಗಿದ್ದಾರೆ.

ಕಾಂಗ್ರಾ ಹಾಗೂ ಕುಲ್ಲು ಜಿಲ್ಲೆಗಳಲ್ಲಿ ಹಠಾತ್ ಪ್ರವಾಹದಿಂದಾಗಿ ಭಾರಿ ಅನಾಹುತ ಸಂಭವಿಸಿದೆ. ಧಾರಾಕಾರ ಮಳೆಯಿಂದಾಗಿ ಇಬ್ಬರು ಮ್ರ‍ಿತಪಟ್ಟಿದ್ದಾರೆ. ಪ್ರವಾಹದ ರಭಸಕ್ಕೆ ಸುಮಾರು 20 ಜನರು ಕೊಚ್ಚಿ ಹೋಗಿದ್ದಾರೆ. ಹಲವರು ನಾಪತ್ತೆಯಾಗಿದ್ದಾರೆ. ಎನ್ ಡಿಆರ್ ಎಫ್ ತಂಡದಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಕಾಂಗ್ರಾ ಜಿಲ್ಲೆಯ ಮನುನಿ ಖಾಡ್ ನಲ್ಲಿ ನೀರಿನ ಮಟ್ಟ ಏರಿಕೆಯಾದ ಕಾರಣ ಇಂದಿರಾ ಪ್ರಿಯದರ್ಶಿನಿ ಹೈಡ್ರೋ ಎಲೆಕ್ಟ್ರಿಕ್ ಪ್ರಾಜೆಕ್ಟ್ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದ ೧೫-೨೦ ಜನರು ಪ್ರವಾಹದಲ್ಲಿ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ನಾಪತ್ತೆಯಾದವರ ಪೈಕಿ ಕೆಲವರನ್ನು ರಕ್ಷಿಸಲಾಗಿದೆ.

ಇನ್ನು ಕುಲುಜಿಲ್ಲೆಯ ಪ್ರವಾಹದಲ್ಲಿ ಮೂವರು ಕೊಚ್ಚಿ ಹೋಗಿದ್ದಾರೆ ಎಂದು ತಿಳಿದುಬಂದಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read