BIG UPDATE : ರಾಜ್ಯದಲ್ಲಿ ‘ಹಿಜಾಬ್’ ನಿಷೇಧ ಆದೇಶ ಇನ್ನೂ ವಾಪಸ್ ಪಡೆದಿಲ್ಲ : ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಮೈಸೂರು : ರಾಜ್ಯದಲ್ಲಿ ‘ಹಿಜಾಬ್’ ನಿಷೇಧ ಆದೇಶ ಇನ್ನೂ ವಾಪಸ್ ಪಡೆದಿಲ್ಲ, ಯೋಚನೆ ಮಾಡಿದ್ದೇವೆ ಅಷ್ಟೇ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಹಿಜಾಬ್ ಆದೇಶದ ಕುರಿತಾದ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ. ಹಿಜಾಬ್ ಆದೇಶ ಇನ್ನೂ ವಾಪಸ್ ಪಡೆದಿಲ್ಲ, ಯೋಚನೆ ಮಾಡಿದ್ದೇವೆ ಅಷ್ಟೇ .  ಯಾರೋ ಪ್ರಶ್ನೆ ಮಾಡಿದ್ದರು, ಅದಕ್ಕೆ ಉತ್ತರ ನೀಡಿದ್ದೇನೆ   ಎಂದರು.

ಹಿಜಾಬ್ ವಿವಾದ ಆದೇಶ ವಾಪಸ್ ಕುರಿತು ಸಿಎಂ ಸಿದ್ದರಾಮಯ್ಯ ಹೇಳಿಕೆ ವಿವಾದವಾಗುತ್ತಿದ್ದಂತೆ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಸಿದ್ದರಾಮಯ್ಯ ಹೇಳಿದ್ದೇನು..? ಏನಿದು ವಿವಾದ

ಮೈಸೂರಿನ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿ, ಹಿಜಾಬ್ ನಿಷೇಧ ಆದೇಶ ಪಡೆಯಲು ಸೂಚನೆ ನೀಡಿದ್ದೇನೆ ಎಂದು ಹೇಳಿದ್ದಾರೆ.

ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಕವಲಂದೆ ಗ್ರಾಮದಲ್ಲಿ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ ಪ್ರಧಾನಿ ಮೋದಿ ಅವರ ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಬೋಗಸ್. ಬಟ್ಟೆ, ಜಾತಿ ಆಧಾರದ ಮೇಲೆ ಜನರನ್ನು, ಸಮಾಜವನ್ನು ವಿಭಜಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಟೀಕಿಸಿದ್ದಾರೆ.ಉಡುಪು ಧರಿಸುವುದು ಅವರವರ ಇಷ್ಟ. ಬಟ್ಟೆ ತೊಡುವುದು, ಊಟ ಮಾಡುವುದು ನಿಮಗೆ ಸೇರಿದ್ದು. ಅದಕ್ಕೆ ನಾನು ಏಕೆ ಅಡ್ಡಿಪಡಿಸಲಿ? ಬಟ್ಟೆ, ಜಾತಿ ಆಧಾರದ ಮೇಲೆ ಬಿಜೆಪಿ ಜನರನ್ನು ವಿಭಜಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದರು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read