BIG NEWS: ನಾಪತ್ತೆಯಾದವರನ್ನು ಹುಡುಕದೇ ಮಿಸ್ಸಿಂಗ್ ಕೇಸ್ ಮುಕ್ತಾಯ: ಸರ್ಕಾರ, ಪೊಲೀಸ್ ಇಲಾಖೆಗೆ ವಿವರಣೆ ಕೇಳಿ ನೋಟಿಸ್ ಜಾರಿಗೊಳಿಸಿದ ಹೈಕೋರ್ಟ್

ಬೆಂಗಳೂರು: ನಾಪತ್ತೆಯಾದವರನ್ನು ಹುಡುಕದೇ ಮಿಸ್ಸಿಂಗ್ ಕೇಸ್ ಮುಕ್ತಾಯಗೊಳಿಸಿರುವ ಪೊಲೀಸರ ಕ್ರಮದ ಬಗ್ಗೆ ಹೈಕೋರ್ಟ್ ವಿವರಣೆ ಕೇಳಿದೆ. ಕಾಣೆಯಾದವರನ್ನು ಹುಡುಕದೇ ಮಿಸ್ಸಿಂಗ್ ಕೇಸ್ ಮುಕ್ತಾಯ ಮಾಡಿರುವ ವಿಚಾರವಾಗಿ ಸರ್ಕಾರ ಹಾಗೂ ಪೊಲೀಸ್ ಇಲಾಖೆಗೆ ಹೈಕೋರ್ಟ್ ವಿವರಣೆ ಕೇಳಿ ನೋಟಿಸ್ ಜಾರಿ ಮಾಡಿದೆ.

ಅಂಕಿ-ಅಂಶಗಳ ಪ್ರಕಾರ ಪ್ರತಿ೮ ನಿಮಿಷಕ್ಕೆ ಒಬ್ಬರು ಕಾಣೆಯಾಗುತ್ತಿದ್ದಾರೆ. ಕಾಣೆಯಾದವರನ್ನು ಹುಡುಕಡೆ ಪೊಲೀಸರು ಕೇಸ್ ಮುಕ್ತಾಯಗೊಳಿಸುತ್ತಿರುವುದು ಯಾಕೆ? ಎಂದು ನ್ಯಾ.ಸೂರಜ್ ಗೋವಿಂದರಾಜ್ ಅವರಿದ್ದ ಪೀಠ ಪ್ರಶ್ನಿಸಿದೆ.

ಕುಮಾರ್ ಎಂಬುವವರು ನಾಪತ್ತೆಯಾಗಿದ್ದರು. ಬೆಂಗಳೂರುನ ಮಹೇಶ್ ಎಂಬುವವರು ಈ ಬಗ್ಗೆ ದೂರು ನೀಡಿದ್ದರು. ಆದರೆ ನಾಪತ್ತೆಯಾದವರನ್ನು ಹುಡುಕದೇ ಪೊಲೀಸರು ಮಿಸ್ಸಿಂಗ್ ಕೇಸ್ ಮುಕ್ತಾಯಗೊಳಿಸಿದ್ದರು. ಪೊಲೀಸರ ಕ್ರಮ ಪ್ರಶ್ನಿಸಿ ಮಹೇಶ್ ಎಂಬುವವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರಣೆ ನಡೆಸಿರುವ ಹೈಕೋರ್ಟ್, ಸರ್ಕಾರ, ಪೊಲೀಸ್ ಇಲಕಹೆಗೆ ಈ ಬಗ್ಗೆ ವಿವರಣೆ ಕೇಳಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read