ಬೆಂಗಳೂರು: ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರಿಗೆ ಹಾಸನ, ಮೈಸೂರಿಗೆ ಭೇಟಿ ನೀಡಲು ಹೈಕೋರ್ಟ್ ಅವಕಾಶ ಕಲ್ಪಿಸಿದೆ.
ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆ ಅಪಹರಿಸಿದ ಆರೋಪದಲ್ಲಿ ನಿರೀಕ್ಷಣಾ ಜಾಮೀನು ನೀಡುವಾಗ ಮೈಸೂರು, ಹಾಸನ ಪ್ರವೇಶಿಸಬಾರದು ಎಂದು ನಿರ್ದೇಶಿಸಿ ಭವಾನಿ ರೇವಣ್ಣ ಅವರಿಗೆ ವಿಧಿಸಲಾಗಿದ್ದ ಷರತ್ತನ್ನು ಹೈಕೋರ್ಟ್ ಸಡಿಲಿಕೆ ಮಾಡಿದೆ. ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್ ಅವರ ಪೀಠದಿಂದ ಈ ಆದೇಶ ನೀಡಲಾಗಿದೆ. 11 ತಿಂಗಳಿಂದ ಇದ್ದ ನಿರ್ಬಂಧ ತೆರವಾಗಿದೆ.
ಹಾಸನಾಂಬ ದೇವಾಲಯಕ್ಕೆ ಭೇಟಿ, ಹಿರಿಯರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು 10 ದಿನ ಹಾಸನ ಮತ್ತು ಮೈಸೂರಿಗೆ ಹೋಗಲು ಅನುಮತಿ ನೀಡಿ 2024ರ ಅಕ್ಟೋಬರ್ 28ರಂದು ಹೈಕೋರ್ಟ್ ಆದೇಶಿಸಿತ್ತು. ನಂತರ ಹಾಸನ, ಮೈಸೂರು ಪ್ರವೇಶಿಸದಂತೆ ವಿಧಿಸಿರುವ ಷರತ್ತು ಸಡಿಲಿಸಲು ಕೋರಿ 2025ರ ಮಾರ್ಚ್ 17ರಂದು ಅವರು ಮಧ್ಯಂತರ ಅರ್ಜಿ ಸಲ್ಲಿಸಿದ್ದರು.