BREAKING: ಮಕ್ಕಳ ಹೆಸರು ಬದಲಾವಣೆ ಬಗ್ಗೆ ಹೈಕೋರ್ಟ್ ಮಹತ್ವದ ಆದೇಶ: ಕಾನೂನಿನಲ್ಲಿ ಅವಕಾಶವಿಲ್ಲದ ಹಿನ್ನಲೆ ಮಾರ್ಗಸೂಚಿ

ಬೆಂಗಳೂರು: ಮಕ್ಕಳ ಹೆಸರು ಬದಲಾವಣೆಗೆ ಕಾನೂನಿನಲ್ಲಿ ಅವಕಾಶವಿಲ್ಲದ ಹಿನ್ನೆಲೆಯಲ್ಲಿ ಹೆಸರು ಬದಲಾವಣೆ ನೋಂದಣಿಗೆ ಹೈಕೋರ್ಟ್ ಮಾರ್ಗಸೂಚಿ ರೂಪಿಸಿದೆ.

ನ್ಯಾಯಮೂರ್ತಿ ಎನ್.ಎಸ್. ಸಂಜಯಗೌಡ ಅವರಿದ್ದ ಹೈಕೋರ್ಟ್ ಪೀಠದಿಂದ ಆದೇಶ ನೀಡಲಾಗಿದೆ. ಮಗುವಿನ ಹೆಸರು ಬದಲಾವಣೆಗೆ ತಂದೆ, ತಾಯಿ ಪ್ರಮಾಣ ಪತ್ರ ಸಲ್ಲಿಸಬೇಕು. ತಂದೆ ತಾಯಿಯ ಗುರುತು ದೃಢಪಟ್ಟ ನಂತರ ಹೆಸರು ಬದಲಾವಣೆ ಮಾಡಬಹುದಾಗಿದೆ. ಹೊಸ ಹೆಸರಿನೊಂದಿಗೆ ಹಳೆಯ ಹೆಸರು ದಾಖಲೆಯಲ್ಲಿ ಇರಬೇಕು. ಇದರಿಂದ ದುರುದ್ದೇಶದ ಹೆಸರು ಬದಲಾವಣೆ ತಪ್ಪಿಸಬಹುದಾಗಿದೆ ಎಂದು ಹೇಳಿದ್ದಾರೆ.

ವಯಸ್ಕರ ಹೆಸರು ಬದಲಾವಣೆಗೂ ಇದೇ ಪದ್ಧತಿ ಅನುಸರಿಸಬಹುದಾಗಿದೆ. ಸರ್ಕಾರ ಸೂಕ್ತ ನಿಯಮ ರೂಪಿಸುವವರೆಗೂ ಈ ನಿರ್ದೇಶನ ಪಾಲಿಸಬೇಕು ಎಂದು ಜನನ ನೋಂದಣಾಧಿಕಾರಿಗಳಿಗೆ ನ್ಯಾಯಮೂರ್ತಿ ಎನ್.ಎಸ್. ಸಂಜಯಗೌಡರು ಸೂಚನೆ ನೀಡಿದ್ದಾರೆ.

ಅದ್ರಿತ್ ಭಟ್ ಹೆಸರನ್ನು ಶ್ರೀಜಿತ್ ಭಟ್ ಎಂದು ಬದಲಿಸಲು ಕೋರಿದ್ದರು. ಉಡುಪಿ ಜನನ ನೊಂದನಾಧಿಕಾರಿಗಳು ನಿರಾಕರಿಸಿದ ಹಿನ್ನೆಲೆಯಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read