ದೈಹಿಕ ಸಂಪರ್ಕ ನಿರಾಕರಿಸುವುದು ದೌರ್ಜನ್ಯವಲ್ಲ: ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು: ದೈಹಿಕ ಸಂಪರ್ಕ ನಿರಾಕರಿಸುವುದು ಐಪಿಸಿ ಸೆಕ್ಷನ್ 498ಎ ಅಡಿ ದೌರ್ಜನ್ಯವಲ್ಲ ಎಂದು ಹೈಕೋರ್ಟ್ ಏಕ ಸದಸ್ಯ ಪೀಠದಿಂದ ಮಹತ್ವದ ಆದೇಶ ನೀಡಲಾಗಿದೆ.

2019 ಡಿಸೆಂಬರ್ 18ರಂದು ಮದುವೆಯಾಗಿದ್ದ ದಂಪತಿ 28 ದಿನ ಜೊತೆಯಲ್ಲಿದ್ದರೂ ಮದುವೆ ನಂತರ ದೈಹಿಕ ಸಂಪರ್ಕಕ್ಕೆ ಮುಂದಾಗಿರಲಿಲ್ಲ. ಆಧ್ಯಾತ್ಮಿಕ ಸಾಧನೆಯತ್ತ ಪತಿ ಒಲವು ಬೆಳೆಸಿಕೊಂಡಿದ್ದ. ದೈಹಿಕ ಪ್ರೀತಿಗಿಂತ ಆತ್ಮಗಳ ಪ್ರೀತಿ ಮುಖ್ಯವೆಂದು ಹೇಳುತ್ತಿದ್ದ. ಆಧ್ಯಾತ್ಮಿಕ ಸಾಧಕಿಯೊಬ್ಬರ ಉಪನ್ಯಾಸ ವೀಕ್ಷಿಸಲು ಹೇಳುತ್ತಿದ್ದ. ದೈಹಿಕ ಸಂಬಂಧ ಬಯಸದ ಪತಿಯ ವಿರುದ್ಧ ಪತ್ನಿ ಐಪಿಸಿ 498ಎ ಅಡಿ ದೂರು ದಾಖಲಿಸಿ ಕ್ರೌರ್ಯದ ಕಾರಣಕ್ಕೆ ವಿಚ್ಛೇದನವನ್ನೂ ಪಡೆದುಕೊಂಡಿದ್ದರು.

ದೈಹಿಕ ಸಂಬಂಧ ನಿರಾಕರಿಸುವ ಕಾರಣಕ್ಕೆ ವಿಚ್ಛೇದನ ಪಡೆಯಬಹುದು. ಆದರೆ, ಐಪಿಸಿ ಸೆಕ್ಷನ್ 498ಎ ಅಡಿ ಇದು ಅಪರಾಧವಾಗುವುದಿಲ್ಲ ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠದಿಂದ ತೀರ್ಪು ನೀಡಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read