ಕಂಟ್ರಾಕ್ಟರ್ ಲೈಸೆನ್ಸ್ ಹೊಂದಿದ್ದ ಗ್ರಾಪಂ ಸದಸ್ಯನಿಗೆ ಹೈಕೋರ್ಟ್ ಶಾಕ್: ಸದಸ್ಯತ್ವದಿಂದಲೇ ಅನರ್ಹಗೊಳಿಸಿ ಮಹತ್ವದ ತೀರ್ಪು

ಕಂಟ್ರಾಕ್ಟರ್ ಲೈಸೆನ್ಸ್ ಹೊಂದಿದ್ದ ಗ್ರಾಫಂ ಸದಸ್ಯನನ್ನು ಅನರ್ಹಗೊಳಿಸಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಹೈಕೋರ್ಟ್ ಕಲಬುರಗಿ ಪೀಠ, ಗ್ರಾಮ ಸದಸ್ಯ ಎಸ್ಕಾಂ ಗುತ್ತಿಗೆದಾರರ ಪರವಾನಿಗೆ ಹೊಂದುವುದು ಲಾಭದ ಹುದ್ದೆ ಎಂದು ಹೇಳಿದೆ.

ಎಸ್ಕಾಂ ಗುತ್ತಿಗೆದಾರರಾಗಿರುವ ಗ್ರಾಮ ಪಂಚಾಯಿತಿ ಸದಸ್ಯ ಮಾಣಿಕ್ಯಪ್ಪ ಅವರನ್ನು ಸದಸ್ಯತ್ವದಿಂದ ಅನರ್ಹಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಕಲಬುರಗಿ ಪೀಠ ಎತ್ತಿ ಹಿಡಿದಿದೆ.

ರಾಯಚೂರಿನ ಸಿವಿಲ್ ಕೋರ್ಟ್ ತಮ್ಮನ್ನು ಗ್ರಾಪಂ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿದ ಆದೇಶ ರದ್ದುಪಡಿಸುವಂತೆ ಕೋರಿ ವಿದ್ಯುತ್ ಗುತ್ತಿಗೆದಾರ ಮಾಣಿಕ್ಯಪ್ಪ ಹೈಕೋರ್ಟ್ ಅರ್ಜಿ ಸಲ್ಲಿಸಿದ್ದು, ಹೈಕೋರ್ಟ್ ನ್ಯಾ, ಸೂರಜ್ ಗೋವಿಂದರಾಜು ಅವರಿದ್ದ ಪೀಠ ಅರ್ಜಿ ವಜಾಗೊಳಿಸಿದೆ.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದ ಅಡಿಯಲ್ಲಿ ಕೇಂದ್ರ ಅಥವಾ ರಾಜ್ಯ ಸರ್ಕಾರದ ನಿಯಂತ್ರಣಕ್ಕೆ ಒಳಪಟ್ಟಿರುವ ಯಾವುದೇ ಪ್ರಾಧಿಕಾರದ ಅಡಿಯಲ್ಲಿ ಲಾಭದಾಯಕ ಹುದ್ದೆ ಹೊಂದಿದ್ದರೆ ಅಂತಹ ಗ್ರಾಪಂ ಸದಸ್ಯ ಅನರ್ಹನಾಗುತ್ತಾನೆ ಎಂದು ಹೇಳಲಾಗಿದೆ. ಈ ಪ್ರಕರಣದಲ್ಲಿ ಅರ್ಜಿದಾರ ಮಾಣಿಕ್ಯಪ್ಪ 2020ರ ಡಿಸೆಂಬರ್ 30ರಂದು ಚಂದ್ರಬಂಡಾ ಗ್ರಾಪಂ ಸದಸ್ಯರಾಗಿ ಆಯ್ಕೆಯಾಗಿದ್ದು, ಅವರು ಜೆಸ್ಕಾಂ, ಕೆಪಿಟಿಸಿಎಲ್ ನಲ್ಲಿ ಕ್ಲಾಸ್ ಒನ್ ಎಲೆಕ್ಟ್ರಿಕಲ್ ಗುತ್ತಿಗೆದಾರರಾಗಿದ್ದಾರೆ. ಇದು ಸರ್ಕಾರದ ಲಾಭದಾಯಕ ಹುದ್ದೆ ಹೊಂದಿರುವುದನ್ನು ಸ್ಪಷ್ಟಪಡಿಸುತ್ತದೆ.

ಸೀಮೆಎಣ್ಣೆ ಡೀಲರ್ ಶಿಪ್ ಕೊಡ ಲಾಭಾದಾಯಕ ಹುದ್ದೆ ಎಂದು ದೆಹಲಿ ಹೈಕೋರ್ಟ್ ಪ್ರಕರಣ ಒಂದರಲ್ಲಿ ಹೇಳಿದೆ. ಈ ಕಾರಣದಿಂದ ರಾಯಚೂರು ಸಿವಿಲ್ ಕೋರ್ಟ್ 2023ರ ಏಪ್ರಿಲ್ 21ರಂದು ಮಾಣಿಕ್ಯಪ್ಪ ಅವರನ್ನು ಗ್ರಾಪಂ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿರುವ ಆದೇಶದಲ್ಲಿ ಮಧ್ಯಪ್ರವೇಶಿಸಲು ಯಾವುದೇ ಸೂಕ್ತ ಕಾರಣವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಅಲ್ಲದೇ, ಮಾಣಿಕ್ಯಪ್ಪ ಅವರ ಅರ್ಜಿಯನ್ನು ವಜಾಗೊಳಿಸಿ ತೀರ್ಪು ನೀಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read