ಕೇಂದ್ರ ಸರ್ಕಾರ ಹಣ ಕೊಟ್ರೆ ಜನಪರ ಕಾರ್ಯಕ್ರಮ ಮಾಡ್ತೀವಿ, ಇಲ್ಲಾಂದ್ರೆ ಇಲ್ಲ ಅಂತ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿದ್ದೀರಾ? ಎಂದು ಜೆಡಿಎಸ್ ಪ್ರಶ್ನಿಸಿದೆ.
ಈ ಕುರಿತಾಗಿ ಪಕ್ಷದಿಂದ ಟ್ವೀಟ್ ಮಾಡಲಾಗಿದ್ದು, ಅರೇ.. ಲೂಟೇಶಿ ನೇತೃತ್ವದ ತುಕಡೆ ಗ್ಯಾಂಗ್ ಪಾರ್ಟಿ.. ನಿಮ್ಮ ಮೂರ್ಖತನವನ್ನು ಏನೆಂದು ಬಣ್ಣಿಸೋದು? 136 ಗೆದ್ದಿದ್ದೀರಿ ಸರಿ, ನೆಮ್ಮದಿ ಇಲ್ಲ. ಗೆಲ್ಲೋಕೆ ಮುಂಚೆ ಕೇಂದ್ರ ಸರ್ಕಾರ ಹಣ ಕೊಟ್ರೆ ಜನಪರ ಕಾರ್ಯಕ್ರಮ ಮಾಡ್ತೀವಿ, ಇಲ್ಲಾಂದ್ರೆ ಇಲ್ಲ ಅಂತ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿದ್ದೀರಾ? ಇಲ್ಲವಲ್ಲ.. ನಿಮಗೆ ಕನೆಕ್ಟಿವಿಟಿ ಸಮಸ್ಯೆ ಎಂದು ಟೀಕಿಸಿದೆ.
ಕೇಂದ್ರದ ಬಳಿ ಬರೋಕೆ ನಿಮಗೆ ಮುಖವೇ ಇಲ್ಲ, ಮುಖೇಡಿ ಪಕ್ಷ ನಿಮ್ಮದು. ಕೇಂದ್ರದಲ್ಲಿ ರಾಜ್ಯದ ನಾಲ್ವರು ಮಂತ್ರಿಗಳಿದ್ದಾರೆ. ಅವರೆಲ್ಲರನ್ನೂ ಒಮ್ಮೆ ವಿಧಾನಸೌಧಕ್ಕೆ ಕರೆಸಿ ಮಾತನಾಡಿಸುವ ಸೌಜನ್ಯವನ್ನು ನಿಮ್ಮ ಸಿಎಂ ಸಿದ್ಧರಾಮಯ್ಯ ಡಿಸಿಎಂ ಡಿ.ಕೆ. ಶಿವಕುಮಾರ್ ತೋರಿದ್ದಾರಾ? ಕೇಳದೆ ಕಿತಾಪತಿ ಮಾಡಿದರೆ ಅನುದಾನ ಬರುತ್ತಾ? ಉಡಾಫೆ ಎಂದರೆ ಇದು ಎಂದು ಹೇಳಲಾಗಿದೆ.
ಕುಮಾರಸ್ವಾಮಿ ಅವರು ಹೇಳಿದ್ದರಲ್ಲಿ ತಪ್ಪೇನಿದೆ? ಮೊಸರಲ್ಲಿ ಕಲ್ಲು ಹುಡುಕೋದು ನಿಮ್ಮ ಹುಟ್ಟಿದ ಗುಣ. ಇದರಲ್ಲಿ ಮಂಡ್ಯಕ್ಕೆ ಅಪಮಾನ ಆಗೋ ಮಾತು ಏನಿದೆ? ಕಡ್ಡಿಗೀರಿ ಗಲ್ಲಿಗಲ್ಲಿಗೂ ಬೆಂಕಿ ಹಚ್ಚೋ ವಿದ್ವಂಸಕ ಕೇಡು ಬುದ್ಧಿ ಏತಕ್ಕೆ?
ಕುಮಾರಸ್ವಾಮಿ ಕೆಲಸ ಮಾಡುತ್ತಿದ್ದಾರಾ? ಇಲ್ಲವಾ? ಅನ್ನೋದು ಕಾಮಾಲೆ ಕಣ್ಣಿಗೆ ಕಾಣಲ್ಲ. ಆ ಬಗ್ಗೆ ನಿಮಗೆ ಮಾಹಿತಿ ಇಲ್ಲ. ದುರ್ಮಾಹಿತಿ ಪಸರಿಸುವ ನಿಮಗೆ ಸತ್ಯ ಅಪಥ್ಯ. ವಾರಕ್ಕೊಮ್ಮೆ ದಿಲ್ಲಿಗೆ ಬಂದು ಕರ್ನಾಟಕ ಭವನದಲ್ಲಿ ಉಂಡುಮಲಗಿ ಬರುವ ನಿಮಗೆ ಒಳ್ಳೆಯ ಕಾರ್ಯಗಳು ತಿಳಿಯಲ್ಲ. ನಿಮ್ಮ ಸಿಎಂ, ಡಿಸಿಎಂ ಇಬ್ಬರೂ ದಿಲ್ಲಿಗೆ ಯಾರ ಪ್ರದಕ್ಷಿಣೆ ಮಾಡಲಿಕ್ಕೆ ಬರುತ್ತಿದ್ದಾರೆ ಅನ್ನೋದು ಗೊತ್ತಿಲ್ಲವೇ? ಅವರೇನು ಅನುದಾನ ಕೇಳಲಿಕ್ಕೆ ಬರುತ್ತಿದ್ದಾರಾ? ಹೈಕಮಾಂಡ್ ಬುಲಾವ್, ಕರ್ನಾಟಕ ಭವನದ ಪಲಾವ್.. ಇಷ್ಟೇ ನಿಮ್ಮ ಯೋಗ್ಯತೆ. ಇಟಲಿಯಕ್ಕನ ಪರ್ಮನೆಂಟ್ ಗುಲಾಮರಿಗೆ ರಾಜ್ಯದ ಹಿತ ಬೇಕಿಲ್ಲ ಎಂದು ಟೀಕಿಸಿದೆ.
ದಿನ ಬೆಳಗಾದರೆ ನಾನೇ ಐದು ವರ್ಷ ಸಿಎಂ! ಇಲ್ಲಾ.. ನವೆಂಬರ್ʼಗೆ ನಾನೇ ಸಿಎಂ..!! ನಾಚಿಕೆ ಆಗಲ್ವೆ ನಿಮಗೆ? 136 ಸೀಟು ಗೆದ್ದ ಪಾರ್ಟಿಯ ಯೋಗ್ಯತೆಯೇ ಇದು. ಪೂರ್ಣ ಬಹುಮತ ಅಸ್ಥಿರ ಸರ್ಕಾರ ನಿಮ್ಮದು. ಈ ಪವರ್ ಪಾಲಿಟಿಕ್ಸ್ʼನಲ್ಲಿ ರಾಜ್ಯವನ್ನು ಹಿರಣ್ಯಾಕ್ಷನಂತೆ ನುಂಗಲು ಹೊರಟಿರುವ ನೀವು ಇನ್ನೊಬ್ಬರಿಗೆ ಉಪದೇಶ ಮಾಡುತ್ತೀರಿ!! ಭಲೇ ಭಲೇ.. ನಿಮ್ಮ ತುಕಡೆ ಪಾರ್ಟಿಗೆ ದಮ್ಮು, ತಾಖತ್ತು ಇದ್ರೆ ಮೊದಲು ನಿಮ್ಮ ಲೀಡರುಗಳಿಗೆ ಕೆಲಸ ಹೇಳಿ. ದಿಲ್ಲಿಗೆ ಬಂದು ಬಂದೂ ಬಸ್ಕಿ ಹೊಡೆಯೋದನ್ನು ನಿಲ್ಲಿಸಲು ಹೇಳಿ. ಅನುದಾನ ಬೇಕಿದ್ದರೆ ಕೇಂದ್ರಕ್ಕೆ ಅರ್ಜಿ ಕೊಡಬೇಕು. ಜನಪಥ ಹತ್ತಕ್ಕೆ ಪ್ರದಕ್ಷಿಣೆ ಹಾಕಿದ್ರೆ ಬರುತ್ತಾ? ತುಕ್ಕು ಸರ್ಕಾರಕ್ಕೆ, ತುಕ್ಕು ಲೂಟೇಶಿ ಪಾರ್ಟಿಗೆ ಇನ್ನಾದರೂ ಸದ್ಬುದ್ಧಿ ಬರಲಿ ಎಂದು ಹೇಳಲಾಗಿದೆ.
ಅರೇ.. ಲೂಟೇಶಿ ನೇತೃತ್ವದ ತುಕಡೆ ಗ್ಯಾಂಗ್ ಪಾರ್ಟಿ.. ನಿಮ್ಮ ಮೂರ್ಖತನವನ್ನು ಏನೆಂದು ಬಣ್ಣಿಸೋದು?
— Janata Dal Secular (@JanataDal_S) October 28, 2025
136 ಗೆದ್ದಿದ್ದೀರಿ ಸರಿ, ನೆಮ್ಮದಿ ಇಲ್ಲ. ಗೆಲ್ಲೋಕೆ ಮುಂಚೆ ಕೇಂದ್ರ ಸರ್ಕಾರ ಹಣ ಕೊಟ್ರೆ ಜನಪರ ಕಾರ್ಯಕ್ರಮ ಮಾಡ್ತೀವಿ, ಇಲ್ಲಾಂದ್ರೆ ಇಲ್ಲ ಅಂತ @INCKarnataka ದ ಪ್ರಣಾಳಿಕೆಯಲ್ಲಿ ಹೇಳಿದ್ದೀರಾ? ಇಲ್ಲವಲ್ಲ.. ನಿಮಗೆ ಕನೆಕ್ಟಿವಿಟಿ… https://t.co/yugRbhUuvK
