ಶ್ರೀನಗರ: ಭಾರಿ ಮಳೆ ಹಿನ್ನೆಲೆಯಲ್ಲಿ ಅಮರನಾಥ ಯಾತ್ರೆ ತಾತಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಾಶ್ಮೀರದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಪಹಲ್ಗಾಮ್, ಬಲ್ತಾಲ್ ಮಾರ್ಗಗಳ ಮೂಲಕ ಸಾಗುವ ಅಮರನಾಥ ಯಾತ್ರೆ ಸ್ಥಗಿತಗೊಂಡಿದೆ ಎಂದು ಜಮ್ಮು-ಕಾಶ್ಮೀರದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ತಿಳಿಸಿದೆ.
ಈವರೆಗೆ 3.93 ಲಕ್ಷಕ್ಕೂ ಅಧಿಕ ಯಾತ್ರಿಕರು ಪವಿತ್ರ ಅಮರನಾಥ ಗುಹಾ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದಾರೆ. ಗುರುವಾರ ಭಗವತಿ ನಗರ ಮೂಲ ಶಿಬಿರದಿಂದ ಯತರೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಮಾಹಿತಿ ನೀಡಿದೆ.
ಭಾರಿ ಮಳೆಯಿಂದಾಗಿ ಮೂಲ ಶಿಬಿರಗಳಿಂದ ಯಾತ್ರಾರ್ಥಿಗಳ ಸಂಚಾರದ ಮೇಲೆ ಪರಿಣಾಮ ಬೀರಿದೆ. ಈ ಹಿನ್ನೆಲೆಯಲ್ಲಿ ಜುಲೈ 31ರವರೆಗೆ ಭಗವತಿ ನಗರದಿಂದ ಜಮ್ಮುವಿನಿಂದ ಬಾಲ್ಟಾಲ್ ಮತ್ತು ನುನ್ವಾನ್ ನ ಮೂಲ ಶಿಬಿರಗಳ ಕಡೆಗೆ ಯಾವುದೇ ಬೆಂಗಾವಲು ಸಂಚಾರವನ್ನು ಅನುಮತಿಸಲಗೌವುದಿಲ್ಲ ಎಂದು ಡಿಐಪಿಆರ್ ತಿಳಿಸಿದೆ.
You Might Also Like
TAGGED:ಭಾರಿ ಮಳೆ