ಕೇವಲ 10 ಸಾವಿರಕ್ಕೆ ಮನೆಗೆ ತರಬಹುದು ಹೀರೋ ಸ್ಪ್ಲೆಂಡರ್ ಪ್ಲಸ್…..!

ಬೈಕ್‌ ಪ್ರಿಯರಿಗೆ ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಆಯ್ಕೆಗಳಿವೆ. ಅದರಲ್ಲೂ ಹೀರೋ ಕಂಪನಿಯ ಸ್ಪ್ಲೆಂಡರ್ ಪ್ಲಸ್ ಅಂತೂ ಗ್ರಾಹಕರನ್ನು ಆಕರ್ಷಿಸ್ತಾ ಇದೆ. ಬಜೆಟ್‌ ಕಡಿಮೆ ಇರುವವರಿಗೂ ಹೇಳಿ ಮಾಡಿಸಿದಂತಹ ಮೋಟಾರ್‌ ಸೈಕಲ್‌ ಇದಾಗಿದೆ. ಈ ಬೈಕ್ ಅನ್ನು ಕೇವಲ 10,000 ರೂಪಾಯಿಗಳ ಡೌನ್ ಪೇಮೆಂಟ್‌ ಮೂಲಕ ಖರೀದಿಸಬಹುದು. ನಂತರ ಪ್ರತಿ ತಿಂಗಳು ನಿಗದಿತ EMI ಪಾವತಿಸಬೇಕು. ಹೀರೋ ಸ್ಪ್ಲೆಂಡರ್ ಖರೀದಿಸಲು ಎಷ್ಟು EMI ಪಾವತಿಸಬೇಕು? ಅದರೊಂದಿಗೆ ಎಷ್ಟು ಬಡ್ಡಿ ಪಾವತಿಸಬೇಕಾಗುತ್ತದೆ ಎಂಬುದನ್ನೆಲ್ಲ ನೋಡೋಣ.

Hero Splendor Plusನ ಆರಂಭಿಕ ಬೆಲೆ 76,306 ರೂಪಾಯಿ. ದೆಹಲಿಯಲ್ಲಿ ಖರೀದಿಸಿದರೆ 6,104 ರೂಪಾಯಿ RTO ಮತ್ತು 6,169 ರೂಪಾಯಿ ರಸ್ತೆ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಈ ಹೆಚ್ಚುವರಿ ವೆಚ್ಚಗಳೊಂದಿಗೆ ಬೈಕಿನ ಆನ್-ರೋಡ್ ಬೆಲೆ ಸುಮಾರು 88,579 ರೂಪಾಯಿ ಆಗುತ್ತದೆ.

EMIನಲ್ಲಿ ಬೈಕ್ ಖರೀದಿಸುವುದು ಹೇಗೆ?

ಹತ್ತು ಸಾವಿರ ರೂಪಾಯಿ ಡೌನ್ ಪೇಮೆಂಟ್ ಮಾಡುವ ಮೂಲಕ ಹೀರೋ ಸ್ಪ್ಲೆಂಡರ್ ಪ್ಲಸ್ ಅನ್ನು ಮನೆಗೆ ತಂದರೆ, ಉಳಿದ ಮೊತ್ತ 78,579 ರೂಪಾಯಿಗೆ ಸಾಲವನ್ನು ತೆಗೆದುಕೊಳ್ಳಬೇಕಾಗುತ್ತದೆ. ಈ ಸಾಲದ ಮೇಲೆ 10.5 ಪ್ರತಿಶತ ವಾರ್ಷಿಕ ಬಡ್ಡಿ ದರವನ್ನು ವಿಧಿಸಲಾಗುತ್ತದೆ. ಹಾಗಾಗಿ ಖರೀದಿದಾರ 36 ತಿಂಗಳವರೆಗೆ ಪ್ರತಿ ತಿಂಗಳು ಸರಿಸುಮಾರು 2,554 ರೂಪಾಯಿ EMI ಅನ್ನು ಪಾವತಿಸಬೇಕಾಗುತ್ತದೆ.

ಈ ರೀತಿ ಒಟ್ಟಾರೆಯಾಗಿ 88,579 ರೂಪಾಯಿ ಪಾವತಿ ಬದಲು ಹೆಚ್ಚುವರಿಯಾಗಿ ಸುಮಾರು 13,365 ರೂಪಾಯಿಗಳನ್ನು ಬಡ್ಡಿಯಾಗಿ ಪಾವತಿಸಬೇಕಾಗುತ್ತದೆ. ಈ EMI ಲೆಕ್ಕಾಚಾರವು ಅಂದಾಜು ಮೌಲ್ಯವಷ್ಟೆ.  ನಿಜವಾದ EMI ಮೊತ್ತವು ಗ್ರಾಹಕರು ಆಯ್ಕೆಮಾಡುವ ಡೀಲರ್‌ಶಿಪ್, ಸ್ಥಳ ಮತ್ತು ವಿಶೇಷ ಕೊಡುಗೆಗಳನ್ನು ಅವಲಂಬಿಸಿರಬಹುದು. ಇದರ ಹೊರತಾಗಿ ಸಾಲದ ಮೇಲಿನ ಬಡ್ಡಿ ದರ ಗ್ರಾಹಕರ CIBIL ಸ್ಕೋರ್‌ ಅನ್ನು ಆಧರಿಸಿರುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read