ಮುಂಬೈ: ಊಹಾಪೋಹಗಳಿಗೆ ತೆರೆ ಎಳೆದ ನಟ ಗೋವಿಂದ ಅವರು ಗುರುವಾರ ಸಿಎಂ ಏಕನಾಥ್ ಶಿಂಧೆ ಅವರ ಶಿವಸೇನೆಗೆ ಸೇರ್ಪಡೆಗೊಂಡರು. ಈ ಕ್ರಮವು ಅವರ ರಾಜಕೀಯ ವವನವಾಸದ ಅಂತ್ಯವನ್ನು ಸೂಚಿಸಿದೆ ಎಂದು ಹೇಳಿದ್ದಾರೆ.
ಮುಂಬೈ ವಾಯವ್ಯ ಕ್ಷೇತ್ರದಿಂದ ಗೋವಿಂದ ಸ್ಪರ್ಧಿಸಬಹುದು ಎಂಬ ವದಂತಿ ಬಲವಾಗಿದೆ.
ಗೋವಿಂದ ಅವರಿಗೆ ರಾಜಕೀಯದಲ್ಲಿ ಇದು ಎರಡನೇ ಇನ್ನಿಂಗ್ಸ್. ನಟ ಈ ಹಿಂದೆ ಕಾಂಗ್ರೆಸ್ ಪಕ್ಷದೊಂದಿಗೆ ಅಲ್ಪಾವಧಿ ಗುರುತಿಸಿಕೊಂಡಿದ್ದರು. 2004 ರಲ್ಲಿ ಮುಂಬೈ ಉತ್ತರ ಕ್ಷೇತ್ರದಿಂದ ಬಿಜೆಪಿಯ ಧೀಮಂತ ನಾಯಕ ರಾಮ್ ನಾಯಕ್ ಅವರನ್ನು ಸೋಲಿಸಿದ್ದರು.
ಆದರೆ, ಸಕ್ರಿಯ ರಾಜಕಾರಣದಿಂದ ಬೇಸತ್ತಿದ್ದ ಗೋವಿಂದ ಅವರ ರಾಜಕೀಯ ಪ್ರೇಮ 2008ರಲ್ಲಿ ಏಕಾಏಕಿ ಅಂತ್ಯಗೊಂಡಿತ್ತು. ನಂತರ ಚಲನಚಿತ್ರಗಳಲ್ಲಿ ಪುನರಾಗಮನವನ್ನು ಮಾಡಲು ಪ್ರಯತ್ನಿಸಿದರು. ಆದರೆ, ಅವರು ಗಲ್ಲಾಪೆಟ್ಟಿಗೆಯನ್ನು ಆಳಿದ ಸಮಯಕ್ಕೆ ಹೋಲಿಸಿದರೆ ಸಾಕಷ್ಟು ಬದಲಾಗಿರುವ ಬಾಲಿವುಡ್ ಉದ್ಯಮದಲ್ಲಿ ನಟನಾಗಿ ಅವರ ಎರಡನೇ ಹಂತದಲ್ಲಿ ಹೆಚ್ಚಿನ ಯಶಸ್ಸನ್ನು ಕಾಣಲಿಲ್ಲ.
#WATCH | Veteran Bollywood actor Govinda joins Shiv Sena in the presence of Maharashtra CM Eknath Shinde pic.twitter.com/vYu2qYDrlO
— ANI (@ANI) March 28, 2024