Watch Video | ಸಾವು – ಬದುಕಿನ ನಡುವೆ ಹೋರಾಡುತ್ತಿದ್ದ ಮಗುವಿನ ಬಚಾವ್​ ಮಾಡಿದ ರಿಯಲ್​ ಹಿರೋ

ಪಕ್ಕದ ಮನೆಯ ಬಾಲ್ಕನಿಯಲ್ಲಿ ಸಿಕ್ಕಿ ನೇತಾಡುತ್ತಿದ್ದ ಪುಟ್ಟ ಬಾಲಕಿಯನ್ನು ರಕ್ಷಿಸುವ ಮೂಲಕ ವ್ಯಕ್ತಿಯೊಬ್ಬರು ರಿಯಲ್​ ಲೈಫ್​ ಹಿರೋ ಎನಿಸಿದ್ದಾರೆ. ಈ ವಿಡಿಯೋ ಇದೀಗ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಅಗುತ್ತಿದ್ದು, ವ್ಯಾಪಕ ಮೆಚ್ಚುಗೆ ಸಂಪಾದಿಸಿದೆ.

ಅಕ್ಟೋಬರ್​ 16ರಂದು ಈ ಘಟನೆ ಸಂಭವಿಸಿದ್ದು ಬಾಲ್ಕನಿಯ ಸರಳಿನಲ್ಲಿ ಸಿಲುಕಿ ನೇತಾಡುತ್ತಿದ್ದ ಪುಟ್ಟ ಹುಡುಗಿಯನ್ನು ಬಚಾವು ಮಾಡಿದ್ದಾರೆ. ನೈಋತ್ಯ ಚೀನಾದ ವಸತಿ ಕಟ್ಟಡದ ಬಾಲ್ಕನಿಯಲ್ಲಿ ಈ ಘಟನೆ ಸಂಭವಿಸಿದೆ. ಬರಿಗಾಲಿನಲ್ಲೇ ಬಾಲ್ಕನಿ ಕಡೆ ಎಚ್ಚರಿಕೆಯಿಂದ ಸಾಗಿದ ವ್ಯಕ್ತಿಯು ಯಾವುದೇ ಸುರಕ್ಷತಾ ಸಾಧನಗಳನ್ನು ಬಳಕೆ ಮಾಡದೇ ತನ್ನ ಜೀವವನ್ನು ಪಣಕ್ಕಿಟ್ಟು ಬಾಲಕಿಯನ್ನು ಕಾಪಾಡಿದ್ದಾನೆ.

ಬಾಲಕಿಯ ಕುತ್ತಿಗೆಯು ಬಾಲ್ಕನಿಯ ಸರಳಿಗೆ ಸಿಕ್ಕಿ ಹಾಕಿಕೊಂಡಿತ್ತು. ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸುವವರಿಗೆ ವ್ಯಕ್ತಿಯು ಬಾಲಕಿಯ ಕಾಲುಗಳನ್ನು ಹಿಡಿದೇ ನಿಂತಿದ್ದರು ಎನ್ನಲಾಗಿದೆ. ವಿಡಿಯೋದಲ್ಲಿ ಅಗ್ನಿಶಾಮಕದಳ ಸಿಬ್ಬಂದಿ ಬಾಲ್ಕನಿ ಬಳಿ ಬರುವುದನ್ನು ಕಾಣಬಹುದಾಗಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸುವವರೆಗೂ ಎಚ್ಚರಿಕೆಯಿಂದ ಈ ವ್ಯಕ್ತಿಯು ಮಗುವಿನ ಪ್ರಾಣ ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read