ವಿಡಾ ಎಲೆಕ್ಟ್ರಿಕ್ ಸ್ಕೂಟರ್ ಮನೆಗೆ ತಂದ ಮೋಟೋ ಕಾರ್ಪ್‌ ಅಧ್ಯಕ್ಷ ಪವನ್​ ಮುಂಜಾಲ್​

ಹೀರೋ ಮೋಟೋಕಾಪ್​ ಕಳೆದ ವರ್ಷ ತನ್ನ ಹೊಸ EV ಅಂಗಸಂಸ್ಥೆ – ವಿಡಾ ಪ್ರಾರಂಭಿಸುವುದರೊಂದಿಗೆ ಎಲೆಕ್ಟ್ರಿಕ್ ಮೊಬಿಲಿಟಿ ಜಾಗದಲ್ಲಿ ಚೊಚ್ಚಲ ಪ್ರವೇಶ ಮಾಡಿದೆ. ಎಲ್ಲಾ ಹೊಸ ಹೀರೊ ವಿಡಾ V1 ಪ್ಲಸ್​ ಮತ್ತು V1 ಪ್ರೋ ಇ-ಸ್ಕೂಟರ್‌ಗಳ ಬೆಲೆ ರೂ 1.45 ಲಕ್ಷ (ಎಕ್ಸ್ ಶೋ ರೂಂ, ಬೆಂಗಳೂರು) ಬೆಲೆಗೆ ಲಭ್ಯವಿದೆ.

ಈಗ, ಹೀರೋ ಮೋಟೋಕಾರ್ಪ್‌ನ ಅಧ್ಯಕ್ಷ ಮತ್ತು ಸಿಇಒ, ಪವನ್ ಮುಂಜಾಲ್ ಅವರು ಹೊಚ್ಚ ಹೊಸ ವಿಡಾ ಎಲೆಕ್ಟ್ರಿಕ್ ಸ್ಕೂಟರ್ ಮನೆಗೆ ತಂದು ಸುದ್ದಿಯಾಗಿದ್ದಾರೆ.

ಹೀರೋ ಮೋಟೋಕಾರ್ಪ್, ಭಾರತದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪೆನಿ. ಇದರ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪವನ್ ಮುಂಜಾಲ್, ಹೊಚ್ಚ ಹೊಸ ವಿಡಾ V1 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮನೆಗೆ ತಂದಿದ್ದಾರೆ. ಕಂಪೆನಿಯ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಈ ಚಿತ್ರವನ್ನು ಹಂಚಿಕೊಳ್ಳಲಾಗಿದೆ. ಭಾರತದಲ್ಲಿ ಡಿಸೆಂಬರ್ 2022 ರಲ್ಲಿ ವಿಡಾ V1 ವಿತರಣೆಗಳು ಪ್ರಾರಂಭವಾಗಿವೆ.

ಹೀರೊ ವಿಡಾ V1 ಅನ್ನು ಎರಡು ರೂಪಾಂತರಗಳಲ್ಲಿ ನೀಡಲಾಗುತ್ತದೆ. ಈ ಎರಡೂ ಎಲೆಕ್ಟ್ರಿಕ್ ಸ್ಕೂಟರ್‌ಗಳು 80 kmph ನಷ್ಟು ಗರಿಷ್ಠ ವೇಗವನ್ನು ಹೊಂದಿವೆ. ರೈಡಿಂಗ್ ಶ್ರೇಣಿಯ ಕುರಿತು ಮಾತನಾಡುತ್ತಾ, ವಿಡಾ ವಿ1 ಪ್ಲಸ್​ 143 km ವ್ಯಾಪ್ತಿಯನ್ನು ನೀಡುತ್ತದೆ ಎಂದು ಪವನ್​ ಮುಂಜಾಲ್​ ಹೇಳಿದ್ದಾರೆ. ಆದರೆ V1 ಪ್ರೊ ಪ್ರತಿ ಚಾರ್ಜ್‌ಗೆ 165 km ವ್ಯಾಪ್ತಿಯನ್ನು ನೀಡುತ್ತದೆ. ಈ ಇ-ಸ್ಕೂಟರ್‌ಗಳನ್ನು ನಿಮಿಷಕ್ಕೆ 1.2 ಕಿಮೀ ವೇಗದಲ್ಲಿ ಚಾರ್ಜ್ ಮಾಡಬಹುದು ಎಂದು ಕಂಪೆನಿ ಹೇಳಿದೆ.

ಹೀರೊ ವಿಡಾ V1 ಪ್ಲಸ್​ ಪ್ರಸ್ತುತ ರೂ. 1.45 ಲಕ್ಷದಷ್ಟಿದ್ದರೆ, ವಿಡಾ V1 ಪ್ರೊ ರೂ. 1.59 ಲಕ್ಷ (ಎಕ್ಸ್ ಶೋ ರೂಂ ಬೆಂಗಳೂರು) ರೂ. ಗೆ ಲಭ್ಯ. Hero Vida V1 Ola S1 Pro, Ather 450X, TVS iQube, Bajaj Chetak ಇತ್ಯಾದಿಗಳಿಗೆ ಪ್ರತಿಸ್ಪರ್ಧಿಯಾಗಿದೆ.

https://twitter.com/HeroMotoCorp/status/1616011229449064451?ref_src=twsrc%5Etfw%7Ctwcamp%5Etweetembed%7Ctwterm%5E1616011229449064451%7Ctwgr%5Eec5fd920250f101e456b8a89f5798013

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read