ರೋಡಿಗಿಳಿದಿದೆ ಹೀರೋ ಮೋಟೋಕಾರ್ಪ್‌ನ ಹೊಸ ಸ್ಕೂಟರ್‌; ಇಲ್ಲಿದೆ ಬೆಲೆ ಮತ್ತು ವಿಶೇಷತೆಗಳ ವಿವರ…….!

ಹೀರೋ ಮೋಟೋ ಕಾರ್ಪ್ ಕಂಪನಿ, ಪ್ಲೆಷರ್ ಪ್ಲಸ್ ಸ್ಕೂಟರ್‌ನ ಹೊಸ ರೂಪಾಂತರವನ್ನು ಬಿಡುಗಡೆ ಮಾಡಿದೆ. ಇದರ ಹೆಸರು ಪ್ಲೆಷರ್ ಪ್ಲಸ್ ಎಕ್ಸ್‌ಟೆಕ್ ಸ್ಪೋರ್ಟ್ಸ್. ಇದರ ಎಕ್ಸ್ ಶೋ ರೂಂ ಬೆಲೆ 79,738 ರೂಪಾಯಿ ಇದೆ. ಹೊಸ ಹೀರೋ ಪ್ಲೆಷರ್ ಪ್ಲಸ್ ಎಕ್ಸ್‌ಟೆಕ್ ಸ್ಪೋರ್ಟ್ಸ್ ರೂಪಾಂತರವು ಎಕ್ಸ್‌ಟೆಕ್ ಕನೆಕ್ಟೆಡ್ ಮತ್ತು ಎಕ್ಸ್‌ಟೆಕ್ ಸ್ಟ್ಯಾಂಡರ್ಡ್ ಟ್ರಿಮ್‌ಗಳ ನಡುವೆ ಇರುತ್ತದೆ. ಹೊಸ Xtec ಸ್ಪೋರ್ಟ್ಸ್ ರೂಪಾಂತರವನ್ನು ಅದರ ಇತರ ಟ್ರಿಮ್‌ಗಳಿಂದ ಪ್ರತ್ಯೇಕಿಸುವ ದೊಡ್ಡ ವ್ಯತ್ಯಾಸವೆಂದರೆ ಗ್ರಾಫಿಕ್ಸ್ ಮತ್ತು ಅದರ ಪೇಂಟ್ ಸ್ಕೀಮ್.

Xtec ಸ್ಪೋರ್ಟ್ಸ್ ಅನ್ನು ಆರೆಂಜ್ ಹೈಲೈಟ್‌ಗಳೊಂದಿಗೆ ಅಬ್ರಾಕ್ಸ್ ಆರೆಂಜ್ ಬ್ಲೂನಲ್ಲಿ ವಿನ್ಯಾಸ ಮಾಡಲಾಗಿದೆ. ಕನ್ನಡಿ ಮತ್ತು ಗ್ರ್ಯಾಬ್ ಹ್ಯಾಂಡಲ್‌ಗಳು ಅದ್ಭುತವಾಗಿವೆ. ರಿಮ್‌ಗಳಿಗೂ ಆರೇಂಜ್‌ ಹೈಲೈಟ್‌ ಮಾಡಲಾಗಿದೆ. ಪಕ್ಕದ ಫಲಕದಲ್ಲಿ ಸಂಖ್ಯೆ- ’18’ ಎಂದು ಬರೆಯಲಾಗಿದೆ.

ಮುಂಭಾಗದ ಮಡ್‌ಗಾರ್ಡ್‌ನಲ್ಲಿಯೂ ಹೊಸ ಗ್ರಾಫಿಕ್ಸ್ ಇದೆ. ಈ ಬದಲಾವಣೆಗಳ ಹೊರತಾಗಿ ಸ್ಕೂಟರ್, 10-ಇಂಚಿನ ಚಕ್ರಗಳು, ಟೆಲಿಸ್ಕೋಪಿಕ್ ಫೋರ್ಕ್‌ಗಳು, ಎರಡೂ ತುದಿಗಳಲ್ಲಿ ಡ್ರಮ್ ಬ್ರೇಕ್‌ಗಳು ಮತ್ತು ಬ್ಲೂಟೂತ್ ಕನೆಕ್ಟಿವಿಟಿಯನ್ನು ಹೊಂದಿದೆ.

ಹೀರೋ ಪ್ಲೆಷರ್ ಪ್ಲಸ್ Xtec ಸ್ಪೋರ್ಟ್ಸ್ 110.9cc, ಏರ್-ಕೂಲ್ಡ್, 4-ಸ್ಟ್ರೋಕ್ ಸಿಂಗಲ್ ಸಿಲಿಂಡರ್ OHC ಎಂಜಿನ್ ಅನ್ನು ಹೊಂದಿದೆ. ಈ ಸ್ಕೂಟರ್‌ನ ಉದ್ದ 1769mm, ಅಗಲ 704mm, ಎತ್ತರ 1161mm ಮತ್ತು ವೀಲ್‌ಬೇಸ್ 1238mm. ಸ್ಕೂಟರ್‌ನ ಗ್ರೌಂಡ್ ಕ್ಲಿಯರೆನ್ಸ್ 155 ಎಂಎಂನಷ್ಟಿದೆ. ಇದರ ಇಂಧನ ತೆಗೆದುಕೊಳ್ಳುವ ಸಾಮರ್ಥ್ಯ 4.8 ಲೀಟರ್. ಮುಂಭಾಗ ಮತ್ತು ಹಿಂಭಾಗದಲ್ಲಿ ಟ್ಯೂಬ್‌ಲೆಸ್ ಟೈರ್‌ಗಳನ್ನು ಅಳವಡಿಸಲಾಗಿದೆ.

ಹೊಸ ರೂಪಾಂತರಗಳ ಬೆಲೆ

– ಪ್ಲೆಶರ್+ XTEC ಕನೆಕ್ಟೆಡ್- 82,738 ರೂ.

– ಪ್ಲೆಶರ್+ XTEC ಸ್ಪೋರ್ಟ್ಸ್- 79,738 ರೂ.

– PLEASURE+ XTEC ZX- 78,138 ರೂ.

– ಪ್ಲೆಷರ್+ XTEC ZX ಜುಬಿಲೆಂಟ್ ಯಲ್ಲೋ – 79,738 ರೂ.

– PLEASURE+ LX- 70,838 ರೂ.

– ಪ್ಲೆಶರ್+ ವಿಎಕ್ಸ್- 74,288 ರೂ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read