ಹಬ್ಬಗಳ ಸಾಲಿನಲ್ಲಿ ಸರ್ವಕಾಲಿಕ ಅತ್ಯಧಿಕ ಮಾರಾಟವನ್ನು ಸಾಧಿಸಿದ ಹೀರೋ ಮೋಟೋಕಾರ್ಪ್

ಮೋಟಾರ್ ಸೈಕಲ್‌ ಮತ್ತು ಸ್ಕೂಟರ್‌ಗಳ ಅತಿದೊಡ್ಡ ತಯಾರಕ ಸಂಸ್ಥೆಯಾದ ಹೀರೋ ಮೋಟೋಕಾರ್ಪ್, ನವರಾತ್ರಿಯಿಂದ ಪ್ರಾರಂಭಿಸಿ ಇತ್ತೀಚಿನ 32-ದಿನಗಳ ಹಬ್ಬದ ಅವಧಿಯಲ್ಲಿ ತನ್ನ ಅತ್ಯಧಿಕ ಚಿಲ್ಲರೆ ಮಾರಾಟವನ್ನು ಸಾಧಿಸಿದೆ.

15.98 ಲಕ್ಷ (1.6 ಮಿಲಿಯನ್) ಯುನಿಟ್‌ಗಳ ಮಾರಾಟದೊಂದಿಗೆ, 2023 ರ ಹಬ್ಬದ ಋತುವಿಗೆ ಹೋಲಿಸಿದರೆ ಕಂಪನಿಯು ಗಮನಾರ್ಹ 13% ಬೆಳವಣಿಗೆಯನ್ನು ದಾಖಲಿಸಿದೆ.

ಹೀರೋ ಮೋಟೋಕಾರ್ಪ್‌ನ ಉತ್ಪನ್ನಗಳಿಗೆ ನಗರ ಮತ್ತು ಗ್ರಾಮೀಣ ಭಾರತದಾದ್ಯಂತ ಸ್ಥಿರವಾದ ಬೇಡಿಕೆ ಇರುವುದಾಗಿ ಸ್ಪಷ್ಟವಾಗಿ ಕಂಡುಬಂದಿದೆ. ಎಕ್ಸ್ಟ್ರೀಮ್ 125R ನೊಂದಿಗೆ 125cc ಮೋಟಾರ್‌ಸೈಕಲ್ ವಿಭಾಗವು ಬೆಳವಣಿಗೆಯ ಪ್ರಮುಖ ಚಾಲಕನಾಗಿ ಹೊರಹೊಮ್ಮಿದೆಯಾದರೂ 100cc ವಿಭಾಗವೂ ಕಂಪನಿಯ ಮಾರಾಟಕ್ಕೆ ಬಹಳ ಧನಾತ್ಮಕ ಕೊಡುಗೆಯನ್ನು ನೀಡಿದೆ.

ಅದೇ ಅವಧಿಯಲ್ಲಿ, ಹೀರೋ ಮೋಟೋಕಾರ್ಪ್ ನ ಇಲೆಕ್ಟ್ರಿಕ್ ವೆಹಿಕಲ್ ಬ್ರ್ಯಾಂಡ್ VIDA, 11,600 ಚಿಲ್ಲರೆ ಮಾರಾಟವನ್ನು ಸಾಧಿಸುವ ಮೂಲಕ ಗಮನಾರ್ಹ ಮೈಲಿಗಲ್ಲನ್ನು ಸಾಧಿಸಿದೆ. ಈಗ ನಡೆಯುತ್ತಿರುವ ವಿಡಾ ನೆಟ್‌ವರ್ಕ್‌ನ ವಿಸ್ತರಣೆ, ಹೀರೋ ಪ್ರೀಮಿಯಾ ಮತ್ತು ಹೀರೋ 2.0 ಔಟ್‌ಲೆಟ್‌ಗಳನ್ನು ಸದುಪಯೋಗಪಡಿಸಿಕೊಳ್ಳುವುದರೊಂದಿಗೆ, ಟಾಪ್ 30 ಧನಾತ್ಮಕ ಪಟ್ಟಣಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಫಲಿತಾಂಶಗಳು ಮತ್ತು ಮುಂಬರುವ ಪೋರ್ಟ್ಫೋಲಿಯೊ ವಿಸ್ತರಣೆ ಬ್ರ್ಯಾಂಡ್ ಅನ್ನು ಮತ್ತಷ್ಟು ಚುರುಕುಗೊಳಿಸುತ್ತದೆ.

ಹಾರ್ಲೇ-ಡೇವಿಡ್ಸನ್ X440, 2800 ಯುನಿಟ್‌ಗಳ ಮಾರಾಟವನ್ನು ಸಾಧಿಸಿದೆ, ಇದು ಬ್ರ್ಯಾಂಡ್‌ನ ಜನಪ್ರಿಯತೆಯನ್ನು ಎತ್ತಿ ತೋರಿಸುತ್ತದೆ. ಈ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಕಂಪನಿಯು ಪ್ರೀಮಿಯಾ ನೆಟ್‌ವರ್ಕ್ ಅನ್ನು 100+ ಸ್ಥಳಗಳಿಗೆ ವಿಸ್ತರಿಸುವ ಗುರಿಯನ್ನು ಹೊಂದಿದ್ದು ಇದು ಈ ಮಹತ್ವಾಕಾಂಕ್ಷೆಯ ಬ್ರ್ಯಾಂಡ್‌ನ ವ್ಯಾಪ್ತಿಯನ್ನು ಮತ್ತು ಆಕರ್ಷಣೆಯನ್ನು ಹೆಚ್ಚಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read