ಬೆಂಗಳೂರು : ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ಹುದ್ದೆಗೆ ಬಡ್ತಿ ಪಡೆಯಲು ಅರ್ಹತೆ ಹೊಂದಿರುವ ಪ್ರೌಢಶಾಲಾ ಶಿಕ್ಷಕರ ಪಟ್ಟಿಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಿ ಪೂರ್ಣ ಮಾಹಿತಿಯನ್ನು ಸಲ್ಲಿಸುವಂತೆ ಶಾಲಾ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
ಶಾಲಾ ಶಿಕ್ಷಣ ಇಲಾಖೆಯ ಪ್ರೌಢಶಾಲಾ ಸಹ ಶಿಕ್ಷಕರುಗಳಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ಹುದ್ದೆಗೆ ಬಡ್ತಿ ನೀಡಲು ಸ್ನಾತಕೋತ್ತರ ವಿದ್ಯಾರ್ಹತೆ ಹೊಂದಿರುವ ಶಿಕ್ಷಕರ ಪಟ್ಟಿಯನ್ನು ಸಿದ್ಧಪಡಿಸಲು ಎಲ್ಲಾ ವಿಭಾಗೀಯ ಕಛೇರಿಗಳಿಗೆ ಸೂಚಿಸಿದ್ದು, ಅದರಂತೆ ವಿಭಾಗೀಯ ಕಛೇರಿಗಳಿಂದ ಸಲ್ಲಿಸಿರುವ ಪಟ್ಟಿಗಳನ್ನು ಪರಿಶೀಲಿಸಲಾಗಿ ಈ ಕೆಳಕಂಡ ನ್ಯೂನತೆಗಳು ಕಂಡುಬಂದಿರುತ್ತದೆ.
- ಕೆಲವು ಸಹ ಶಿಕ್ಷಕರ ಜನ್ಮ ದಿನಾಂಕವನ್ನೇ ಸೇವೆಗೆ ಸೇರಿದ ದಿನಾಂಕವನ್ನಾಗಿ ನಮೂದು ಮಾಡಲಾಗಿರುತ್ತದೆ.
- ಕೆಲವು ಸಹ ಶಿಕ್ಷಕರುಗಳ ಜನ್ಮ ದಿನಾಂಕ ಮತ್ತು ಸೇವೆಗೆ ಸೇರಿದ ದಿನಾಂಕವನ್ನು ಪರಿಶೀಲಿಸಿದಾಗ, ಶಿಕ್ಷಕರು 11,15,19,20 ವಯಸ್ಸಿನಲ್ಲಿಯೇ ಸರ್ಕಾರಿ ಸೇವೆಗೆ ಸೇರಿದ ಬಗ್ಗೆ ಮಾಹಿತಿ ನೀಡಿದ್ದು, ಇಂತಹ ಪ್ರಕರಣಗಳನ್ನು ಸಂಪೂರ್ಣವಾಗಿ ಪರಿಶೀಲಿಸಿ(ಶಿಕ್ಷಕರ ಸೇವಾಪುಸ್ತಕವನ್ನು ಪರಿಶೀಲಿಸಿ )ನಿಖರವಾದ ದಿನಾಂಕವನ್ನು ನಮೂದು ಮಾಡಲು ತಿಳಿಸಿದೆ.
- Qualification ಕಾಲಂ ನಲ್ಲಿ ಸ್ನಾತಕೋತ್ತರ ಪದವಿ ಎಂದು ನಮೂದು ಮಾಡಿದ್ದು ಹಾಗೂ PG ಕಾಲಂ ನಲ್ಲಿ Yes ಎಂದು ನಮೂದಿಸಿದ್ದು Master Degree ಕಾಲಂನಲ್ಲಿ ಸ್ನಾತಕೋತ್ತರ ಪದವಿಯ ವಿಷಯವನ್ನು ನಮೂದಿಸಿರುವುದಿಲ್ಲ. ಇಂತಹ ಪ್ರಕರಣಗಳಲ್ಲಿ ಶಿಕ್ಷಕರು ಪಡೆದಿರುವ ಸ್ನಾತಕೋತ್ತರ ಪದವಿಯ ವಿಷಯಗಳನ್ನು ನಮೂದಿಸಲು ತಿಳಿಸಿದೆ.(ಸೇವಾ ವಹಿಯಲ್ಲಿ ನಮೂದಿಸಿರುವಂತೆ).
- ಕೆಲವೊಂದು ಶಿಕ್ಷಕರ ಪ್ರಕರಣಗಳಲ್ಲಿ ಷರಾ ಕಾಲಂ ನಲ್ಲಿ Transfer ಎಂದು ನಮೂದಿಸಲಾಗಿರುತ್ತದೆ. ಇಂತಹ ಪ್ರಕರಣಗಳಲ್ಲಿ ಶಿಕ್ಷಕರು ವರ್ಗಾವಣೆ ಹೊಂದಿ ಕರ್ತವ್ಯ ನಿರ್ವಹಿಸುತ್ತಿರುವ ಜಿಲ್ಲೆಯಲ್ಲಿ ಆಯಾ ಜಿಲ್ಲಾ ಉಪನಿರ್ದೇಶಕರು(ಆಡಳಿತ) ಇವರು ಸದರಿ ಶಿಕ್ಷಕರ ಮಾಹಿತಿಯನ್ನು ಅವರ ಪಟ್ಟಿಯಲ್ಲಿ ಅಪ್‌ಡೇಟ್ ಮಾಡುವುದು. ಒಂದು ವಿಭಾಗದಿಂದ ಇನ್ನೊಂದು ವಿಭಾಗದ ಜಿಲ್ಲೆಗಳಿಗೆ ವರ್ಗಾವಣೆಯಾದ ಸಂದರ್ಭದಲ್ಲಿಯೂ ಸಹಿತ ಶಿಕ್ಷಕರು ವರ್ಗಾವಣೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಜಿಲ್ಲೆಯ ಉಪನಿರ್ದೇಶಕರು ಈ ಶಿಕ್ಷಕರುಗಳ ಮಾಹಿತಿಯನ್ನು ಸೇರ್ಪಡೆ ಮಾಡುವುದು.
- ಕೆಲವೊಂದು ಪ್ರಕರಣಗಳಲ್ಲಿ New Entry ಎಂದು ನಮೂದಾಗಿದ್ದು, New Entry ಆಗಿರುವುದಕ್ಕೆ ಕಾರಣಗಳನ್ನು ನಮೂದಿಸಲು ತಿಳಿಸಿದೆ.
- ಕೆ.ಜಿ.ಐ.ಡಿ ಸಂಖ್ಯೆ ನಮೂದಿಸದೇ ಇರುವ ಪ್ರಕರಣಗಳಲ್ಲಿ ಶಿಕ್ಷಕರ ಕೆ.ಜಿ.ಐ.ಡಿ ಸಂಖ್ಯೆಯನ್ನು ನಮೂದಿಸಲು ಸೂಚಿಸಿದೆ.
- ಮರಣ, ನಿವೃತ್ತಿ, ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ಹೊಂದಿದ ಪ್ರಕರಣಗಳು ಈ ಪಟ್ಟಿಯಲ್ಲಿದ್ದಲ್ಲಿ ಅವುಗಳನ್ನು ಪಟ್ಟಿಯಿಂದ ತೆಗೆದುಹಾಕುವುದು.
- ಜನ್ಮ ದಿನಾಂಕ ಮತ್ತು ಸೇವೆಗೆ ಸೇರಿದ ದಿನಾಂಕಗಳನ್ನು ದಿನಾಂಕ-ತಿಂಗಳು-ವರ್ಷ(DD-MM-YY) ಈ ಫಾರ್ಮಾಟ್‌ನಲ್ಲೇ ನಮೂದಿಸಿ ನೀಡಲು ತಿಳಿಸಿದೆ. ದಿನಾಂಕ, ತಿಂಗಳು ಮತ್ತು ವರ್ಷ ಇವುಗಳ ನಡುವೆ ಖಾಲಿ ಜಾಗ, ಚುಕ್ಕೆಗಳು ಅಥವಾ / ಚಿಹ್ನೆಗಳಿದಲ್ಲಿ ಅವುಗಳನ್ನು ತೆಗೆದು ಕಡ್ಡಾಯವಾಗಿ ದಿನಾಂಕ-ತಿಂಗಳು-ವರ್ಷ ಈ ನಮೂನೆಯಲ್ಲೇ ಡೇಟಾ ನೀಡಲು ಸೂಚಿಸಿದೆ.
- ಕಾಲಂ ನಂ.9ರಲ್ಲಿ Date of entry into present cadre ಎಂದು ನಮೂದಿಸಿದೆ. ಅಂದರೆ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರುಗಳು ನೇರ ನೇಮಕಾತಿ ಹೊಂದಿದ್ದಲ್ಲಿ ಅಂತಹ ಶಿಕ್ಷಕರುಗಳ ಸೇವೆಗೆ ಸೇರಿದ ದಿನಾಂಕವನ್ನು ನಮೂದಿಸುವುದು. ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಯಿಂದ ಪ್ರೌಢಶಾಲಾ ಸಹ ಶಿಕ್ಷಕರುಗಳ ಹುದ್ದೆಗೆ ಬಡ್ತಿ ಹೊಂದಿರುವಂತಹ ಶಿಕ್ಷಕರುಗಳಿಗೆ ಸಂಬಂಧಿಸಿದಂತೆ ಸದರಿ ಕಾಲಂನಲ್ಲಿ ಬಡ್ತಿ ಹೊಂದಿ ಕರ್ತವ್ಯಕ್ಕೆ ಹಾಜರಾದ ದಿನಾಂಕವನ್ನು ನಮೂದಿಸುವುದು.
ಈ ಪತ್ರದೊಂದಿಗೆ ವಿಭಾಗವಾರು ಸಲ್ಲಿಕೆಯಾದ Excel ಮಾಹಿತಿಯನ್ನು ಇ-ಮೇಲ್ ಮೂಲಕ ಮರಳಿಸಿದೆ. ಸದರಿ ಮಾಹಿತಿಯನ್ನು Excel Format g 3 oo Excel Format PDF Format & & g “do ಪಟ್ಟಿಯಲ್ಲಿ ನೀಡಿರುವ ಮಾಹಿತಿಯು ಸರಿಯಾಗಿದ್ದು, ಮುಂದೆ ಯಾವುದೇ ತಿದ್ದುಪಡಿ/ಸೇರ್ಪಡೆಗಳು ಇರುವುದಿಲ್ಲವೆಂದು ದೃಢೀಕರಿಸಿ ಮಾಹಿತಿಯನ್ನು 03 ದಿನಗಳೊಳಗಾಗಿ ಇ-ಮೇಲ್ ಮೂಲಕ est4cpibng@gmail.com ಹಾಗೂ ಹಾರ್ಡ್ ಪ್ರತಿಯನ್ನು ಈ ಕಛೇರಿಗೆ ಕಳುಹಿಸಲು ತಿಳಿಸಿದೆ.