ಪ್ರಪಾತದಲ್ಲಿ ಬಿದ್ದ ಆನೆ ಹಾಗೂ ಮರಿ ರಕ್ಷಣೆ: ಭಾವುಕ ವಿಡಿಯೋ ವೈರಲ್​

ಚರಂಡಿಯಲ್ಲಿ ಸಿಲುಕಿದ್ದ ತಾಯಿ ಆನೆ ಹಾಗೂ ಮರಿಯನ್ನು ರಕ್ಷಿಸಲು ಪಶುವೈದ್ಯರ ಗುಂಪು ಹೋರಾಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಇದರ ವಿಡಿಯೋ ಕಳೆದ ವರ್ಷ ಚಿತ್ರೀಕರಿಸಲಾಗಿದ್ದರೂ, ಅದೀಗ ವೈರಲ್​ ಆಗಿದೆ. ದಿ ಫಿಗೆನ್‌ನಿಂದ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ, ಚರಂಡಿಯೊಳಗೆ ಸಿಲುಕಿರುವ ತಾಯಿ ಆನೆಯನ್ನು ನೋಡಬಹುದು. ಪಶುವೈದ್ಯರು ಆನೆಯನ್ನು ಹೊರತೆಗೆಯಲು ಹೆಣಗಾಡುತ್ತಿರುವಾಗ, ಭಾರೀ ಮಳೆಯು ರಕ್ಷಣಾ ಕಾರ್ಯಕ್ಕೆ ಅಡ್ಡಿಪಡಿಸುತ್ತದೆ. ಆದರೂ ಜನರು ತಾಯಿ ಆನೆಯನ್ನು ಹೊರತೆಗೆಯುವಲ್ಲಿ ಯಶಸ್ವಿಯಾದರು.

ವಿಡಿಯೋ ಮುಂದುವರಿದಂತೆ, ಪಶುವೈದ್ಯರು ದಣಿದ ತಾಯಿಯನ್ನು ಸಮಾಧಾನಪಡಿಸುತ್ತಿದ್ದಾರೆ. ನಂತರ ಇತರರು ಕೆಳಗೆ ಬಿದ್ದ ಮರಿ ಆನೆಯನ್ನು ಕಷ್ಟಪಟ್ಟು ಮೇಲಕ್ಕೆ ಎತ್ತುತ್ತಾರೆ.

ಸ್ವಲ್ಪ ಹೋರಾಟದ ನಂತರ, ತಾಯಿ-ಮಗು ಒಂದಾಗುತ್ತಾರೆ. ನಂತರ ಅವು ರಸ್ತೆ ದಾಟಿ ಕಾಡನ್ನು ಸೇರುತ್ತವೆ. ಥೈಲ್ಯಾಂಡ್‌ನಲ್ಲಿ ಈ ಘಟನೆ ನಡೆದಿದೆ. ಥಾಯ್ಲೆಂಡ್‌ನ ನಖೋನ್ ನಯೋಕ್ ಪ್ರಾಂತ್ಯದಲ್ಲಿ ಉಂಟಾದ ಚಂಡಮಾರುತದ ಸಮಯದಲ್ಲಿ ಆನೆ ಮತ್ತು ಮರಿ 7 ಅಡಿ ಆಳದ ಗುಂಡಿಗೆ ಜಾರಿದ್ದವು.

https://twitter.com/TheFigen_/status/1638219174722912256?ref_src=twsrc%5Etfw%7Ctwcamp%5Etweetembed%7Ctwterm%5E1638219174722912256%7Ctwgr%5E250893032b13816d902c287fcede6d30d8d20892%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fheres-how-a-mother-elephant-and-her-baby-were-rescued-from-a-drain-in-thailand-old-video-goes-viral-2350223-2023-03-22

https://twitter.com/Rootsycom/status/1638228877402054670?ref_src=twsrc%5Etfw%7Ctwcamp%5Etweetembed%7Ctwterm%5E1638228877402054670%7Ctwgr%5E250893032b13816d902c287fcede6d30d8d20892%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fheres-how-a-mother-elephant-and-her-baby-were-rescued-from-a-drain-in-thailand-old-video-goes-viral-2350223-2023-03-22

https://twitter.com/tortuga89r/status/1638575225993347072?ref_src=twsrc%5Etfw%7Ctwcamp%5Etweetembed%7Ctwterm%5E1638575225993347072%7Ctwgr%5E250893032b13816d902c287fcede6d30d8d20892%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fheres-how-a-mother-elephant-and-her-baby-were-rescued-from-a-drain-in-thailand-old-video-goes-viral-2350223-2023-03-22

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read