ವರ್ಗಾವಣೆಗೊಂಡ `ಪ್ರಾಥಮಿಕ ಶಾಲಾ ಶಿಕ್ಷಕ’ರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ|Transfer of teachers

 

ಬೆಂಗಳೂರು : 2023_24ನೇ_ಸಾಲಿನಲ್ಲಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಂಡಿದ್ದು ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಹುದ್ದೆಗಳ ಮಂಜೂರಾತಿ  ವಿವರಗಳನ್ನು ಶಾಲಾವಾರು, ವೃಂದವಾರು, ವಿಷಯವಾರು, ತಾಲೂಕುವಾರು, ಜಿಲ್ಲಾವಾರು ನಿಗಧಿಪಡಿಸಿ ಮಂಜೂರುಮಾಡಿ ಇ-ರಿಜಿಸ್ಟರ್ ನಲ್ಲಿ ಬಿಡುಗಡೆ ಮಾಡಲಾಗಿದೆ.

ಪ್ರಸ್ತುತ 2022-23ನೇ ಸಾಲಿನ ಶಿಕ್ಷಕರ ವರ್ಗಾವಣಾ ಪ್ರಕ್ರಿಯೆ ದಿನಾಂಕ: 11/08/2023 dob ಮುಕ್ತಾಯವಾಗಿದೆ. ಅದರಂತೆ ಸಂಬಂಧಿಸಿದ ಶಿಕ್ಷಕರುಗಳು ಕರ್ತವ್ಯದಿಂದ ಬಿಡುಗಡೆ ಹೊಂದಿ ವರ್ಗಾಯಿತ ಸ್ಥಳದಲ್ಲಿ ಕರ್ತವ್ಯಕ್ಕೆ ಹಾಜರಾಗಿರುತ್ತಾರೆ, ಸರ್ಕಾರಿ ಪ್ರಾಥಮಿಕ ಶಾಲಾ ವಿಭಾಗದ ಒಟ್ಟು ಹುದ್ದೆಗಳಲ್ಲಿ ಉಲ್ಲೇಖ-6ರ ಸರ್ಕಾರದ ಆದೇಶ ಸಂಖ್ಯೆ: ಇಪಿ 442 ಪಿಜಿಎಸ್ 2022 ದಿನಾಂಕ: 29/08/2022 ರಂತೆ ಹಾಗೂ ಪ್ರಾಥಮಿಕ ಪ್ರೌಢ ಶಿಕ್ಷಕ ಸಂಪನ್ಮೂಲದ ಸಮರ್ಪಕ ಮರುಹಂಚಿಕೆ ಕುರಿತಾದ ಉಲ್ಲೇಖ-7ರ ಈ ಕಛೇರಿಯ ಸುತ್ತೋಲೆ ಸಂಖ್ಯೆ: ಸಿ3(7) ಪ್ರಾಶಾಶಿ ವರ್ಗಾವಣೆ/ಹೆಚ್ಚುವರಿ-01/2022-23, ದಿನಾಂಕ: 29/07/2022 ರಂತೆ ಜಿಲ್ಲಾವಾರು ಹುದ್ದೆಗಳನ್ನು 31/12/2021ರ ..ಅಂತ್ಯದಲ್ಲಿ ಇದ್ದಂತೆ, ವಿದ್ಯಾರ್ಥಿ ಮತ್ತು ಶಿಕ್ಷಕರ ಅನುಪಾತ (ಪಿ.ಟಿ.ಆರ್) ನಂತೆ ಶಾಲಾವಾರು ಹುದ್ದೆಗಳ ಪರಿಷ್ಕರಣೆ ಮಾಡಿ ವರ್ಗಾವಣೆಗೆ ಪರಿಗಣಿಸಿ: ಮಂಜೂರಾತಿ ಹುದ್ದೆಗಳನ್ನು ಇ-ರಿಜಿಸ್ಟರ್ ಮೂಲಕ ಅಂತಿಮಗೊಳಿಸಿ ಆದೇಶಿಸಿ ಪ್ರಕಟಿಸಲಾಗಿರುತ್ತದೆ.

ಮುಂದುವರೆದು, 2022-23ನೇ ಸಾಲಿನ ವರ್ಗಾವಣೆ ಪ್ರಕ್ರಿಯೆ ಮುಕ್ತಾಯವಾಗಿರುತ್ತದೆ. ಪ್ರಸ್ತುತ ವರ್ಗಾವಣಾ ಪ್ರಕ್ರಿಯೆಯ ನಂತರ ವೃಂದ ಬಲವಾರು, ವಿಷಯವಾರು, ಶಾಲಾವಾರು, ತಾಲ್ಲೂಕುವಾರು, ಜಿಲ್ಲಾವಾರು, ಹುದ್ದೆಗಳು ಈ ಕೆಳಕಂಡ ಕಾರಣಗಳಿಂದಾಗಿ ವ್ಯತ್ಯಾಸವಾಗಿರುತ್ತದೆ. ಅದರಂತೆ ಪರಿಶೀಲಿಸಿ ಈ ಹಿಂದೆ ಇದ್ದ ಮಂಜೂರಾದ ಹುದ್ದೆಗಳ ಮಿತಿಗೊಳಪಟ್ಟು (ದಿ: 31/12/2021ರ ಪಿ.ಟಿ.ಆರ್ ನಂತೆ) ಮರು ನಿಗಧಿಪಡಿಸಿ ಆದೇಶಿಸಿದೆ. (ಆದರೆ ಮೇಲಿನ ಸರ್ಕಾರದ ಆದೇಶದಲ್ಲಿ ಈ ಕಛೇರಿಯಿಂದ ಅಂದರೆ ಆಯುಕ್ತರಿಗೆ ಮಂಜೂರಾದ ಒಟ್ಟು ಹುದ್ದೆಗಳ ಮತ್ತು ವೃಂದಬಲವಾರು ನಿಗಧಿಪಡಿಸಿದ ಮಿತಿಯೊಳಗೆ ಜಿಲ್ಲಾವಾರು ಹುದ್ದೆಗಳನ್ನು ಹಂಚಿಕೆ ಮಾಡಲು ಬದಲಾವಣೆ ಮಾಡಿ ಆದೇಶಿಸಲು ಅಧಿಕಾರ ಪ್ರತ್ಯಾಯೋಜನೆಯನ್ನು ಮಾಡಿ ಸರ್ಕಾರವು ಅನುಮತಿ ನೀಡಿರುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read